ಬೀದರ್ : ಸದ್ಬಳಕೆಯಾಗದ ಶುದ್ಧ ನೀರಿನ ‌ಘಟಕ | ಗ್ರಾಮಸ್ಥರ ಆಕ್ರೋಶ

ಬೀದರ್ : ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನ ಇಟಗಾ ಗ್ರಾಮದಲ್ಲಿ ಅಳವಡಿಸಲಾದ ಶುದ್ಧ ಕುಡಿಯವ ನೀರು ಪೂರೈಸುವ ಘಟಕ ಹಾಳಾಗಿದೆ. ಇಟಗಾ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿಯೇ ಎಂಟು ವರ್ಷಗಳ ಹಿಂದೆ ನಿರ್ಮಿಸಲಾದ ಶುದ್ಧ ನೀರಿನ ಘಟಕ ಸದ್ಬಳಕೆಯಾಗದೆ ಸಂಪೂರ್ಣವಾಗಿ ಪಾಳು ಬಿದ್ದಿದೆ.

ಯಂತ್ರಗಳು ತುಕ್ಕು ಹಿಡಿದು ಹಾಳಾಗಿವೆ. ಕಿಟಕಿ ಗಾಜು ಒಡೆದಿವೆ.ನೆಲಹಾಸು ಕಿತ್ತುಕೊಂಡು ಹೋಗಿದೆ. ಗ್ರಾಮದ ನಿವಾಸಿಗರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಗಿತ್ತು.

ಕಿಯಾನಿಸ್ಕ್‌ ಕಂಪನಿಯಿಂದ ₹2.25 ಲಕ್ಷ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಶಡ್‌ ನಿರ್ಮಾಣ ಮಾಡಲಾಗಿದೆ. ’ಘಟಕದ ಕಾರ್ಯ ಪೂರ್ಣಗೊಳಿಸಿ ಹೋದ ಅಧಿಕಾರಿಗಳು ಇಷ್ಟು ವರ್ಷವಾದರೂ ಮರಳಿ ಬಂದಿಲ್ಲ. ನಮಗೆ ಶುದ್ಧ ಕುಡಿಯುವ ನೀರು ಲಭಿಸಿಲ್ಲ’ ಎಂದು ಗ್ರಾಮ ಪಂಚಾಯತಿ ಸದಸ್ಯ ಅಣ್ಣೆಪ್ಪ ಇಸ್ಲಾಮಪುರ್‌ THG ಕನ್ನಡ ಗೆ ತಿಳಿಸಿದ್ದಾರೆ.

ಅಧಿಕಾರಿ ಹಾಗೂ ಸದಸ್ಯರ ನಿರಾಸಕ್ತಿಯೇ ಬೆಲೆ ಬಾಳುವ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಲು ಹಾಗೂ ಸದ್ಬಳಕೆಯಾಗದೇ ಇರಲು ಮೂಲ ಕಾರಣವಾಗಿದೆ. ಈಗಲಾದರೂ ಎಚ್ಚುತ್ತು ದುರಸ್ಥಿ ಕಾರ್ಯ ಕೈಗೊಂಡು ಗ್ರಾಮದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸಿದಲ್ಲಿ ಸರ್ಕಾರದ ಉದ್ದೇಶ ಯಶಸ್ಸಿಗೊಳಿಸಿದಂತಾಗುತ್ತದೆ ಎಂಬುದ್ದು ಗ್ರಾಮಸ್ಥರ ಒತ್ತಾಯವಾಗಿದೆ.

’ಶುದ್ಧ ನೀರಿನ ಘಟಕ ಅಳವಡಿಸಿದ ನಂತರ ಸಂಬಂಧಿಸಿದ ಇಲಾಖೆ ಅಧಿಕಾರಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸದಿರುವುದರಿಂದ ಸಮಸ್ಯೆಯಾಗಿದೆʼ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಶೀಲ ಕುಮಾರ್ THG ಕನ್ನಡ ವಾಹಿನಿಗೆ ಮಾಹಿತಿ ನೀಡಿದ್ದಾರೆ

ಹನಮಂತ ದೇಶಮುಖ
THG ಕನ್ನಡ

Latest Indian news

Popular Stories