
ಬೀದರ್ : ಆಸ್ಪತ್ರೆ ಸುತ್ತ ಸ್ಮಶಾನ, ಆಸ್ಪತ್ರೆಗೆ ಬರಲು ರೋಗಿಗಳ ಹಿಂದೇಟು.
ಆಸ್ಪತ್ರೆ ಸುತ್ತ ಸ್ಮಶಾನ ಭೂಮಿ ಇರುವ ಕಾರಣ, ಗ್ರಾಮಸ್ಥರು ಮೂಢ ನಂಬಿಕೆಯ ಮೊರೆ ಹೋಗಿದ್ದು, ಆಸ್ಪತ್ರೆಗೆ ತೆರಳಲು ಹಿಂದೇಟು ಹಾಕುತ್ತಿರುವ ಘಟನೆ ಬೀದರ್‌ನಲ್ಲಿ ನಡೆದಿದೆ.
ಹುಮನಾಬಾದ್ ತಾಲ್ಲೂಕಿನ ಬಗದಲ್ ಗ್ರಾಮದ ಸರ್ಕಾರಿ ಆಸ್ಪತ್ರೆ ಎರಡ್ಮೂರು ವರ್ಷಗಳ ಹಿಂದೆ ಕಟ್ಟಲಾಗಿದ್ದು, ಆಸ್ಪತ್ರೆ ಸುತ್ತಲೂ ವಿವಿಧ ಸಮುದಾಯದ ಸ್ಮಶಾನ ಭೂಮಿ ಆವರಿಸಿದೆ. ಹೀಗಾಗಿ ಆಸ್ಪತ್ರೆಗೆ ತೆರಳಲು ಗ್ರಾಮಸ್ಥರು, ರೊಗಿಗಳು ತೆರಳಲು ಹಿಂದೇಟು ಹಾಕುತ್ತಿದ್ದಾರೆ. ರಾತ್ರಿ ವೇಳೆ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿ ಬೀದಿ ದೀಪಗಳು ಇಲ್ಲಾ, ಅಷ್ಟೇ ಅಲ್ಲದೇ ಸ್ಮಶಾನ ಭೂಮಿಯಲ್ಲಿರುವ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಮಹಿಳೆಯರು ಭಯ ಬೀಳುತ್ತಿದ್ದು, ಇಂದಿಗೂ ಹೆರಿಗೆಗೆ ಬರುವ ಮಹಿಳೆಯರನ್ನ ಗ್ರಾಮದ ಮದ್ಯೆ ಇರುವ ಹಳೆ ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸಲಾಗುತ್ತಿದೆ. ಗ್ರಾಮದ ಹೊರಗೆ ಅದರಲ್ಲೂ ಸ್ಮಶಾನ ಭೂಮಿರುವ ಕಾರಣ ಇಲ್ಲಿ ದೆವ್ವ ಭೂತಗಳ ಕಾಟ ಇದೆ, ಹಾಗಾಗಿ ಇಲ್ಲಿ ಬರುವ ಹೆರಿಗೆ ರೋಗಿಗಳಿಗೆ ಗ್ರಾಮದಲ್ಲಿರುವ ಹಳೆಯ ಕಟ್ಟಡವನ್ನೇ ದುರಸ್ಥಿಗೊಳಿಸಿ ಹೆರಿಗೆಗಾಗಿ ಪ್ರತ್ಯೇಕ ಆಸ್ಪತ್ರೆಯೆನ್ನ ಕಟ್ಟುವಂತೆ ಒತ್ತಾಯಿಸುತ್ತಿದ್ದಾರೆ. ಅಸ್ಪತ್ರೆಯ ಸಿಬ್ಬಂದಿ ಮಾತನಾಡಿದ್ದು, ಮೊದಲೆಲ್ಲಾ ತಾಲೂಕಿನಲ್ಲಿಯೇ ಅತಿ ಹೆಚ್ಚು ಡೆಲಿವರಿಗಳು ನಮ್ಮ ಆಸ್ಪತ್ರೆಯಲ್ಲಿ ಆಗುತ್ತಿದ್ದವು. ತಿಂಗಳಿಗೆ 30-40 ಹೆರಿಗೆ ಗಳ ಆಗುತ್ತಿದ್ದವು. ಆದರೆ ಆಸ್ಪತ ಇಲ್ಲಿಗೆ ಸ್ಥಳಾಂತರವಾದ ಮೇಲೆ ತಿಂಗಳಿಗೆ 18-20 ಮಾತ್ರ ಆಗುತ್ತಿವೆ ಎಂದು ಹೇಳುತ್ತಿದ್ದಾರೆ.
THG BIDAR




