Bidar

ಬೀದರ್: ಕಲುಷಿತ ನೀರು ಸೇವನೆ, 6 ಮಕ್ಕಳು ಸೇರಿ 18 ಜನ ಅಸ್ವಸ್ಥ

ಔರಾದ ತಾಲೂಕಿನ ಎಕಂಬಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಕ್ಯಾಳ ಗ್ರಾಮದಲ್ಲಿ ನೀರಿನ ಸಮಸ್ಯೆ ‌ಉಲ್ಬಣಗೊಂಡ ಕಾರಣ ಹೊಲಸು ನೀರು ಸೇವಿಸಿದ ಪರಿಣಾಮ ವಾಟರ್ ಮ್ಯಾನ್ ಸೇರಿದಂತೆ 18 ಜನ ಅಸ್ವಸ್ಥಗೊಂಡ ಘಟನೆ ಜರುಗಿದೆ.

IMG 20230620 WA0034 Bidar

ಆರು ಮಕ್ಕಳು ಸೇರಿದಂತೆ ಒಟ್ಟು 18 ಜನ ಅಸ್ವಸ್ಥರನ್ನು
ಔರಾದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚರಂಡಿ ಮೇಲೆ ಕುಡಿಯುವ ನೀರಿನ ಬಾವಿ ಇದ್ದು,ಗ್ರಾಮದವರು ಕಲುಷಿತಗೊಂಡ ನೀರು ಕುಡಿದ ಕಾರಣ ಅಸ್ವಸ್ಥರಾಗಿದ್ದಾರೆ. ಇನ್ನೂ ಗ್ರಾಮದಲ್ಲಿ ಹಲವರಿಗೆ ವಾಂತಿ ಭೇದಿ ಶುರುವಾಗಿದೆ, ಗ್ರಾಮದಲ್ಲಿ ಅಂಬುಲೆನ್ಸ್ ಬಂದಿದೆ. ಅಸ್ವಸ್ಥರಾಗಿದವರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಗ್ರಾಮಸ್ಥರೊಬ್ಬರು THG ಕನ್ನಡ ವಾಹಿನಿಗೆ ತಿಳಿಸಿದರು.

ವಿಷಯ ತಿಳಿದು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿದ ಬೀದರ್ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಎಸ್ಪಿ ಚನ್ನಬಸವಣ್ಣ ಲಂಗೋಟಿ, ಜಿ.ಪಂ ಸಿಇಒ ಶಿಲ್ಪಾ ಎಂ ಅಸ್ವಸ್ಥರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು

ವರದಿ : ಹಣಮಂತ ದೇಶಮುಖ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button