ಬಾವಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ಜಿಂಕೆಯನ್ನ ಸ್ಥಳೀಯರು ರಕ್ಷಿಸಿದ ಘಟನೆ ಬೀದರ್‌ನಲ್ಲಿ ನಡೆದಿದೆ.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕೊಳ್ಳೂರ್ ಗ್ರಾಮದ ರೈತರೊಬ್ಬರ ಜಮೀನಿನಲ್ಲಿರುವ ಬಾವಿಯಲ್ಲಿ ಬಿದ್ದಿದ್ದ ಕೃಷ್ಣಮೃಗವನ್ನ ಗಮನಿಸಿದ ಸ್ಥಳೀಯರು, ಬಾವಿಗೆ ಇಳಿದು ರಕ್ಷಿಸುವ ಕಾರ್ಯ ಮಾಡಿದ್ದಾರೆ. ಜಿಂಕೆಗೆ ಹಗ್ಗ ಕಟ್ಟಿ ಜಿಂಕೆಯನ್ನ ಮೆಲಕ್ಕೆ ಎತ್ತಿದ ಸುರಕ್ಷಿತವಾಗಿ ಹೊರಗೆ ತಂದು ಬಿಟ್ಟಿದ್ದಾರೆ. ಜಿಂಕೆ ರಕ್ಷಿಸಿದ ರಿಯಾಜ್ ಪಾಷಾ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ