ಬೀದರ್: ಏಕ್ ಬಾರ್ ಫೀರ್ ಸೇ ಮೋದಿ ಸರ್ಕಾರ ಗೊಡೆ ಬರಹ ಅಭಿಯಾನಕ್ಕೆ ಬೀದರ್
ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಬುದವಾರ ಬೀದರ್ ಚಿಟ್ಟಾ ವಾಡಿ ಗ್ರಾಮದಲ್ಲಿರುವ ೬೧ನೇ ಬೂತ್ ಸಂಖ್ಯೆಯ ಓಣಿಯಲ್ಲಿ ಗೋಡೆ ಬರಹ ಅಭಿಯಾನಕ್ಕೆ ಚಾಲನೆ ನೀಡಿದರು.
ಗೋಡೆ ಬರಹ ಕಾರ್ಯಕ್ರಮ ಇಂದಿನಿಂದ ಬೀದರ್ ಜಿಲ್ಲೆಯಲ್ಲಿ ಚಾಲನೆ ನೀಡಿ ಪ್ರಾರಂಭಿಸಲಾಗಿದೆ. ಜಿಲ್ಲೆಯಾದ್ಯಂತ ಎಲ್ಲಾ ಬೂತ್ ಗಳಲ್ಲಿ ‘ಏಕ್ ಬಾರ್ ಫಿರ್ ಸೆ ಮೋದಿ ಸರ್ಕಾರ್’ (ಮತ್ತೊಮ್ಮೆ ಮೋದಿ ಸರ್ಕಾರ) ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಬಿಜೆಪಿ ಮುಖಂಡರನ್ನು ಕಾರ್ಯಕರ್ತರನ್ನು ತೊಡಗಿಸಿಕೊಳ್ಳುವುದು ಮತ್ತು ಅದನ್ನು ಯಶಸ್ವಿಗೊಳಿಸುವುದು ನಮ್ಮ ಪ್ರಯತ್ನವಾಗಿದೆ. ಈ ಘೋಷಣೆಯು ೨೦೨೪ ರಲ್ಲಿ ಮತ್ತೊಮ್ಮೆ ಮೋದಿ ಸರ್ಕಾರವನ್ನು ರಚಿಸಬೇಕು ಮತ್ತು ದೇಶದಲ್ಲಿ ಸ್ಥಿರವಾದ ಅಭಿವೃದ್ಧಿ ನಡೆಯಬೇಕು ಎಂದರು ಪ್ರತಿ ಬೂತ್ನಲ್ಲಿ ೫ ಕಡೆ ಗೋಡೆ ಬರಹಕ್ಕೆ ಚಾಲನೆ ಕೊಡಲಾಗುತ್ತದೆ. ೨೦೨೪ಕ್ಕೆ ಮತ್ತೊಮ್ಮೆ ಮೋದಿ ಎಂಬುದು ದೇಶದ ಅಪೇಕ್ಷೆಯಾಗಿದೆ ವಿಕಸಿತ ಭಾರತದ ಸಂಕಲ್ಪವನ್ನು ನರೇಂದ್ರ ಮೋದಿಜೀ ಅವರು ಹೊಂದಿದ್ದಾರೆ. ಅದನ್ನು ಈಡೇರಿಸಲು ಮತ್ತೊಮ್ಮೆ ಮೋದಿ ಸಂಕಲ್ಪಕ್ಕೆ ಜನತೆ ಭಾರಿ ಬೆಂಬಲ ನೀಡುತ್ತಿದ್ದಾರೆ ಎಂದು ತಿಳಿಸಿದರು.
೨೦೨೪ಕ್ಕೆ ಮತ್ತೊಮ್ಮೆ ಮೋದಿ ಎಂಬ ಲೋಕಸಭಾ ಚುನಾವಣೆಯ ಗೋಡೆ ಬರಹ ಅಭಿಯಾನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೀ, ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಅವರ ಸೂಚನೆ ಮೇರೆಗೆ ಗೋಡೆ ಬರಹ ಆರಂಭಿಸಲಾಗಿದೆ. ಪ್ರತಿ ಬೂತ್ನಲ್ಲಿ ೫ ಕಡೆ ಗೋಡೆ ಬರಹಕ್ಕೆ ಚಾಲನೆ ಕೊಡಲಾಗುತ್ತದೆ. ೨೦೨೪ಕ್ಕೆ ಮತ್ತೊಮ್ಮೆ ಮೋದಿ ಎಂಬುದು ದೇಶದ ಅಪೇಕ್ಷೆಯಾಗಿದೆ ಎಂದು ತಿಳಿಸಿದರು.
ವಿಕಸಿತ ಭಾರತದ ಸಂಕಲ್ಪದ ಮೂಲಕ ಮೋದಿ ಅವರ ಜನಪರ ಯೋಜನೆಗಳು ಜನರನ್ನು ತಲುಪುತ್ತಿವೆ. ರಾಜ್ಯದ ಜನತೆ ಕೂಡಾ ಬಿಜೆಪಿ ಮತ್ತು ಮೋದಿ ಅವರ ಮೇಲಿನ ಗೌರವದಿಂದ ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ ಜನಸಾಮಾನ್ಯರ ಮನೆ ಮನೆಗೆ ತಲುಪುವ ಯೋಜನೆಗಳು ನಮ್ಮ ಪ್ರಧಾನಿ ನರೇಂದ್ರ ಮೋದಿ ಜೀ ಸರರ್ಕಾರದ ಯೋಜನೆಗಳು ಹಲವು ಜನರು ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಬೀದರ್ ದಕ್ಷಿಣ ಪ್ರಧಾನ ಕಾರ್ಯದರ್ಶಿ ಚನ್ನಪ್ಪ ಗೌರಶೆಟ್ಟಿ, ಚಂದ್ರಯ್ಯ ಸ್ವಾಮಿ ಮುಖಂಡರಾದ ಶಿವಾಜಿ ಪಾಟೀಲ್ ಜಗನ್ನಾಥ ಪಾಟೀಲ್, ಶಶಿಧರ ಹೊಸಳ್ಳಿ, ಉದಯಕುಮಾರ ತೋರಣ, ವಿಜಯಕುಮಾರ ಪಾಟೀಲ್, ಮಲ್ಲಿಕಾರ್ಜುನ್ ಚಿಟ್ಟಾ, ಗುರುನಾಥ ರಾಜಗಿರಾ, ಪ್ರಶಾಂತ ಸಿಂದೋಲ, ಕೈಲಾಶನಾಥ ಕಾಜಿ, ಶಿವಕುಮಾರ ಪಾಟೀಲ್, ಆನಂದ ಪಾಟೀಲ್, ಶಿವಕಾಂತ ಶೇಕಾಪುರ, ವೀರೇಶ ಸ್ವಾಮಿ, ವೈಜಿನಾಥ ಚಿಟ್ಟಾವಾಡಿ, ಸಂಜು ಮದರಗಿ, ರಮೇಶ ಡಿಜೆ, ರಮೇಶ ಬೋರಗಿ, ವೈಜಿನಾಥ ಚಿಟ್ಟಾ, ಶರಣು ಸ್ವಾಮಿ, ಪುಟ್ಟು ಸುತಾರ, ಬಂಡೆಪ್ಪ, ಪಂಡರಿ, ರಾಗು ರೆಡ್ಡಿ, ನಾಗೇಶ ಪಾಂಚಾಳ, ನಂದಕುಮಾರ, ಆಕಾಶ, ಅನೀನ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.