ಕರ್ನಾಟಕ ನಾಮಕರಣವಾಗಿ 50 ವರ್ಷ ಪೂರೈಸಿದ ಹಿನ್ನೆಲೆ ರಾಜ್ಯಾದ್ಯಂತ ಕರ್ನಾಟಕ-50 ಸಂಭ್ರಮ ಆಚರಿಸುತ್ತಿದೆ. ಈ ಹಿನ್ನೆಲೆ, ಬೀದರ್ ಪೊಲೀಸರು ಇದೇ 19 ರಂದು ಪಂಜಿನ ಮೆರವಣಿಗೆ ನಡೆಸಿ ವಿಶೇಷ ಗೌರವ ಸಲ್ಲಿಸಲು ಸಜ್ಜಾಗಿದ್ದಾರೆ.
ನಿನ್ನೆ ಸಾಯಂಕಾಲ ನಗರದ ನೆಹರು ಕ್ರೀಡಾಂಗಣದಲ್ಲಿ ರಿಹರ್ಸಲ್ ನಡೆಸಿದ ಪೊಲೀಸ್ ಇಲಾಖೆಯ ಸಿಬ್ಬಂದಿ ನೊಡುಗರ ಗಮನ ಸೆಳೆದರು. 15 ನಿಮಿಷಗಳಿಗು ಹೆಚ್ಚು ಕಾಲ 150 ಸಿಬ್ಬಂದಿ ರಿಹರ್ಸಲ್‌ನಲ್ಲಿ ಭಾಗಿಯಾಗಿದ್ದರು. ಕೊನೆಯದಾಗಿ ಪೊಲೀಸ್ ಸಿಬ್ಬಂದಿ ಪಂಜಿನಲ್ಲಿ ಮೂಡಿಬಂದ ಕರ್ನಾಟಕ-50 ಎಲ್ಲರ ಗಮನ ಸೆಳೆಯಿತು