
ವೈರಲ್ ಅಗುತ್ತಿದೆ ಭಾಲ್ಕಿ ಹುಡುಗರ ಡ್ಯಾನ್ಸ್ ವಿಡಿಯೋ | 21 ಲಕ್ಷಕ್ಕೂ ಅಧಿಕ ವೀವ್ಸ್
ಬೀದರ್ : ಇದು ಡಿಜಿಟಲ್ ಯುಗ, ಎಲ್ಲರೂ ಇನ್ಸ್ಟಾಗ್ರಾಮ್, ಫೇಸ್ಬುಕ್, ಟ್ಟಿಟರ್ನಲ್ಲಿದ್ದಾರೆ. ಜನರು ಈ ಪ್ಲಾಟ್ಫಾರ್ಮ್ಗಳಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತಾರೆ, ಉಪಯುಕ್ತ ಮಾಹಿತಿಯನ್ನು ವೀಕ್ಷಿಸುವುದರಿಂದ ಹಿಡಿದು ಮನರಂಜನೆ ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಅಲ್ಲದೆ, ರೀಲ್ಸ್, ಶಾರ್ಟ್ ವಿಡಿಯೋ ಮೂಲಕ ರಾತ್ರೋರಾತ್ರಿ ಫೇಮಸ್ ಸಹ ಆಗ್ತಾರೆ.
ಹೌದು.. ಇತ್ತೀಚೆಗೆ ರೀಲ್ಗಳನ್ನು ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಕ್ಯಾಮರಾದಲ್ಲಿ ಜನರು ನೃತ್ಯ, ಹಾಡುಗಾರಿಕೆ, ನಟನೆ ಮತ್ತು ಇತರ ವಿಚಿತ್ರ ಚಟುವಟಿಕೆಗಳ ವೀಡಿಯೊಗಳನ್ನು ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚಿನ ರೀಲ್ಸ್ ಕ್ರೇಜ್ ಹೇಗಿದೆ ಅಂದ್ರೆ, ಚಿತ್ರ ವಿಚಿತ್ರವಾಗಿ ವಿಡಿಯೋ ಮಾಡುವ ಮೂಲಕ ವೈರಲ್ ಆಗುತ್ತಿದ್ದಾರೆ. ಅಲ್ಲದೆ, ಹೆಚ್ಚು ವಿವ್ಸ್ ಪಡೆಯಲು ಸಾರ್ವಜನಿಕ ಪ್ರದೇಶಗಳಲ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ.
ಕರ್ನಾಟಕದ ಕೀರಿಟ ಅಂತನೇ ಖ್ಯಾತಿ ಪಡೆದಿರುವ ಬೀದರನ ಭಾಲ್ಕಿ ಪಟ್ಟಣದಲ್ಲಿ ಮೂರು ಯುವಕರು ರೈಲ್ವೆ ನಿಲ್ದಾಣದಲ್ಲಿ ಮಾಡಿರುವ ವಿಡಿಯೋ ಫುಲ್ ವೈರಲ್ ಅಗುತ್ತಿದೆ ,ಆ ವಿಡಿಯೋವನ್ನು ಭಾಲ್ಕಿ ಟುಡೇ ಎಂಬ ಫೇಸ್ಬುಕ್ ಪೇಜ್ ನವರು ಹಂಚಿಕೊಂಡಿದ್ದಾರೆ ,
ಈ ಪೇಜ್ ನಲ್ಲಿ ಇಲ್ಲಿಯ ತನಕ ಸುಮಾರು 21 ಲಕ್ಷಕ್ಕೂ ಅಧಿಕ ವಿವ್ಸ್ ಪಡೆದಿದ್ದು,85 ಸಾವಿರಕ್ಕೂ ಅಧಿಕ ಲೈಕ್ ಮತ್ತು 2 ಸಾವಿರಕ್ಕೂ ಅಧಿಕ ಕಾಮೆಂಟ್ ಕೂಡ ಬಂದಿವೆ,
ಮಾಹಿತಿಯ ಪ್ರಕಾರ ಈ ಯುವಕರು ಭಾಲ್ಕಿಯ @STAR DANCE ACADEMY, BHALKI ಯವರು ಎಂದು ತಿಳಿದು ಬಂದಿದೆ
ವರದಿ : ಹಣಮಂತ ದೇಶಮುಖ
THG ಬೀದರ್




