ಬೀದರ್: ಸರ್ಕಾರಿ ಕಚೇರಿಯಲ್ಲಿ ಬಟ್ಟೆ ಬಿಚ್ಚಿ ಕುಳಿತ ಭೂಪ

ಬೀದರ್‌ನ ತಹಶೀಲ್ದಾರ ಕಚೇರಿಯಲ್ಲಿ ಸರಕಾರಿ ನೌಕರ ಅಸಭ್ಯವಾಗಿ ವರ್ತಿಸಿರುವ ಕುರಿತು ವರದಿಯಾಗಿದೆ.

ನಗರದ ಭಗವಂತ ಸಿಂಗ್ ವೃತ್ತದಲ್ಲಿರೋ ತಹಶೀಲ್ದಾರ ಕಚೇರಿಯಲ್ಲಿ ಘಟನೆ ನಡೆದಿದ್ದು ಗಣಕೀಕರಣ ಪಹಣಿ ವಿತರಣಾ ಕೇಂದ್ರದಲ್ಲಿ‌ ಕಾರ್ಯ ನಿರ್ವಹಿಸ್ತಿರೋ ಬಸವರಾಜ್ ಈ ರೀತಿಯಾಗಿ ವರ್ತಿಸಿದ್ದಾನೆ.

ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡ್ತಿರೊ ಬಸವರಾಜ್ ಒಂದೂವರೆದಿಂದ ತಹಶೀಲ್ದಾರ ಕಚೇರಿಯಲ್ಲಿ ಕೆಲಸ ಮಾಡ್ತಾ ಇದ್ದಾನೆ.

ಬಟ್ಟೆ ಏಕೆ ಬಿಚ್ವಿದ್ದೀರಾ ಎಂದು‌ ಪ್ರಶ್ನೆ ಮಾಡಿದ್ರೇ, ಶಕೆ ಎಂದು ಸಬೂಬು ನೀಡ್ತಿರೋ ಆಸಾಮಿ. ಸಾರ್ವಜನಿಕರು‌ ಪ್ರಶ್ನೆ ಮಾಡಿದ್ರೆ, ಅಸಭ್ಯ ವರ್ತನೆ ತೋರಿದ್ದಾನೆ. ಇದೀಗ ಈತನ ವಿರುದ್ದ ಕ್ರಮಕ್ಕೆ ಮುಂದಾಗ್ತಾರಾ ತಹಶೀಲ್ದಾರರು ಎಂದು ಕಾದು ನೋಡಬೇಕಾಗಿದೆ‌.

Latest Indian news

Popular Stories