
ಭಾರತ ಜೋಡೋ ಯಾತ್ರೆ ಯಿಂದ ದೇಶದ ಜನರ ಮನಸು ಬೆಸೆದವರು ರಾಹುಲ್ ಗಾಂಧಿ | ಮಹಾಲಕ್ಷ್ಮಿ ಮನೆಗೆ ಬರಲಿದ್ದಾಳೆ : ಡಿಸಿಎಂ ಡಿ.ಕೆ.ಶಿವಕುಮಾರ್
ಕಾರವಾರ (ಕುಮಟಾ) : ಭಾರತ ಜೋಡು ಯಾತ್ರೆ ಯಿಂದ ದೇಶದ ಜನರ ಮನಸು ಬೆಸೆದವರು ರಾಹುಲ್ ಗಾಂಧಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕುಮಟಾದ ಮಹಾತ್ಮಾಗಾಂಧಿ ಮೈದಾನದಲ್ಲಿ ಶುಕ್ರವಾರ ಪ್ರಜಾಧ್ವನಿ- 2 ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಉತ್ತರ ಕನ್ನಡ ರಾಜಕಾರಣದಲ್ಲಿ ಬದಲಾವಣೆ ಕಾಣುತ್ತಿದೆ.ಕಾಂಗ್ರೆಸ್ ನವರು ಒಟ್ಟಾಗಿದ್ದೇವೆ . ಈ ಸಲ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದರು.
ಹಿಂದೆ ಡಬ್ಬಲ್ ಎಂಜಿನ್ ಸರ್ಕಾರ ಇತ್ತು , ಅವರು ಮಾಡಿದ್ದೇನು ? ಅವರ ಕೃತ್ಯಗಳಿಂದ ಜನ ನಮ್ಮನ್ನ ಆಯ್ಕೆ ಮಾಡಿದಾರೆ ಎಂದರು.
ಬಿಜೆಪಿ ಮಾತು ಕೊಟ್ಟಂತೆ ನಡೆದಿಲ್ಲ , ರೈತರ ಆದಾಯ ಹೆಚ್ಚಾಗಿಲ್ಲ ಎಂಬುದನ್ನು ಬಿಜೆಪಿ ಯವರು ನಿಮ್ಮ ಬಳಿ ಬಂದಾಗ ಪ್ರಶ್ನಿಸಿ ಎಂದು ಕಾರ್ಯಕರ್ತರಿಗೆ ಹೇಳಿದರು. ನಾವು ನುಡಿದಂತೆ ನಡೆದಿದ್ದೇವೆ. ಉತ್ತರ ಕನ್ನಡ ಜಿಲ್ಲೆಯ ನೀವು ಉತ್ತಮ ಸಂಸ್ಕೃತಿ ಜನ. ನೀವು ಯೋಚಿಸಿ, ಬಿಜೆಪಿ ಯಿಂದ ಒಂದು ಒಳ್ಳೆಯ ಕೆಲಸ ಆಗಿದ್ದರೆ ಹೇಳಿ ಎಂದು ಸಭಿಕರನ್ನು ಪ್ರಶ್ನಿಸಿದರು.
ಬಂಗಾರಪ್ಪ ಆಶ್ರಯ,ಆರಾಧನಾ, ವಿಶ್ವ ಯೋಜನೆ ತಂದರು. ಮುಖ್ಯಮಂತ್ರಿ ದೇವರಾಜ ಅರಸು ಕಾಲದಲ್ಲಿ ಉಳುವವರಿಗೆ ಭೂಮಿ ಕೊಟ್ಟೆವು.ಗುಂಡೂರಾವ್, ಕೃಷ್ಣ, ಸಿದ್ದರಾಮಯ್ಯ ಎಷ್ಟೊಳ್ಳೆ ಕಾರ್ಯಕ್ರಮ ಕೊಟ್ಟಿದ್ದಾರೆ. ಗ್ಯಾರಂಟಿ ಯೋಜನೆಗಳು ಜನರ. ಬದುಕಿನಲ್ಲಿ ಹೊಸ ಬೆಳಕು ತಂದಿವೆ. ನೀವು ಇವುಗಳನ್ನು ನೆನಪಿಸಿಕೊಳ್ಳಿ ಎಂದರು.
ಮಹಾಲಕ್ಷ್ಮಿ ಮನಗೆ ಬರಲಿದ್ದಾಳೆ :
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ,
ರಾಹುಲ್ ಸಹಿ ಮಾಡಿದ ಕಾರ್ಡ ನಿಮಗೆ ತಲುಪಿದೆ. ಮಹಾಲಕ್ಷ್ಮಿ ವರ್ಷಕ್ಕೆ ಒಂದು ಲಕ್ಷ ತರುವವಳಿದ್ದಾಳೆ . ಈಗ ಗೃಹಲಕ್ಷ್ಮಿ ಈಗಾಗಲೇ ನಿಮ್ಮ ಮನೆ ಬೆಳಗಿದ್ದಾಳೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಕುಮಟಾದಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಮಾಡುವುದು ಖಚಿತ. ಜನರಿಗೆ ಆರೋಗ್ಯ ವಿಮೆ, ಆಸ್ಪತ್ರೆ ಬಿಲ್ ಝಿರೋ ಬರೋ ಹಾಗೆ ಮಾಡ್ತೆವೆ ಎಂದರು.
ದಕ್ಷಿಣ ಕನ್ನಡದವರು ಕಟ್ಟಿದ ಬ್ಯಾಂಕಗಳನ್ನು ಬಿಜೆಪಿಯವರು ಬ್ಯಾಂಕ್ ಸಹ ಮುಚ್ಚಿದರು . ಕರ್ನಾಟಕಕ್ಕೆ ದ್ರೋಹ ಮಾಡಿದರು. ಹಾಗಾಗಿ
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಕ್ಷೇತ್ರಗಳನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.
ಅಂಜಲಿ ನಿಂಬಾಳ್ಕರ್ ಹೆಸರು ಹೇಳದೆ ಡಿ.ಕೆ.ಶಿವಕುಮಾರ್ ಮತಯಾಚನೆ ಮಾಡಿದರು. ವಿಜಯಕುಮಾರ್ ಸೊರಕೆ, ರಮಾನಾಥ ರೈ, ಮಾರ್ಗರೆಟ್ ಆಳ್ವಾ, ಮಂಕಾಳು ವೈದ್ಯ , ದೇಶಪಾಂಡೆ ವೇದಿಕೆಯಲ್ಲಿ ಇದ್ದರು.
…




