ಸ್ಪರ್ಧಿಸಿದ ಅಭ್ಯರ್ಥಿಗಳ ಚುನಾವಣಾ ವೆಚ್ಚ ನೋಡಿಕೊಳ್ಳಲು ಅಧಿಕಾರಿಗಳ ನೇಮಕ : Bidar Municipal Elections

ಬೀದರ ಏಪ್ರೀಲ್ 20 (ಕರ್ನಾಟಕ ವಾರ್ತೆ): Bidar Municipal Elections ಬೀದರ ನಗರಸಭೆ ಸಾರ್ವತ್ರಿಕ ಚುನಾವಣೆ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ಹಳ್ಳಿಖೇಡ (ಬಿ) ವಾರ್ಡ ನಂ. 11ರ ಉಪ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳ ಚುನಾವಣಾ ವೆಚ್ಚ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನೇಮಿಸಿದ್ದಾರೆ.
ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಪ್ರತಿನಿತ್ಯ ಚುನಾವಣೆಗೆ ಮಾಡಿದ ವೆಚ್ಚದ ಬಗ್ಗೆ ಲೆಕ್ಕ ಇಡಲು ನಗರ ಸ್ಥಳೀಯ ಸಂಸ್ಥೆಗಳಿಗೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ.
ಬೀದರ ನಗರಸಭೆ ವಾರ್ಡ ನಂಬರ್ 1ರಿಂದ 17ರವರೆಗೆ ನೋಡಲ್ ಅಧಿಕಾರಿಗಳು, ಲೆಕ್ಕ ವರ್ತುಲ ಕಛೇರಿಯ ಲೆಕ್ಕ ಪರಿಶೋಧನಾಧಿಕಾರಿಗಳಾದ ವಿಷ್ಣು ಮೊಬೈಲ್: 9740653494, ಸ್ಥಳೀಯ ಲೆಕ್ಕ ವರ್ತುಲ ಕಛೇರಿ ಲೆಕ್ಕ ಅಧೀಕ್ಷಕರಾದ ಜಗದೀಶ ಮೊಬೈಲ್: 9886820236, ಸಹಾಯಕ ಸಿಬ್ಬಂದಿಯಾಗಿ ಸ್ಥಳೀಯ ಲೆಕ್ಕ ವರ್ತುಲ ಕಛೇರಿಯ ಲೆಕ್ಕ ಸಹಾಯಕರು ವಿಜಯ: ಮೊ:8217589919.
ಬೀದರ ನಗರಸಭೆ ವಾರ್ಡ ನಂಬರ್ 18ರಿಂದ 35ರವರೆಗೆ ನೋಡಲ್ ಅಧಿಕಾರಿಗಳು, ಲೆಕ್ಕ ವರ್ತುಲ ಕಛೇರಿಯ ಲೆಕ್ಕ ಪರಿಶೋಧನಾಧಿಕಾರಿಗಳಾದ ವಿಷ್ಣು ಮೊಬೈಲ್: 9740653494, ಸ್ಥಳೀಯ ಲೆಕ್ಕ ವರ್ತುಲ ಕಛೇರಿ ಲೆಕ್ಕ ಅಧೀಕ್ಷಕರಾದ ಕೀರಣಕುಮಾರ ಮೊಬೈಲ್: 9449312650., ಸಹಾಯಕ ಸಿಬ್ಬಂದಿ ಸ್ಥಳೀಯ ಲೆಕ್ಕ ವರ್ತುಲ ಕಛೇರಿ ಲೆಕ್ಕ ಸಹಾಯಕರಾದ ಪ್ರಕಾಶ ಮೊಬೈಲ್: 9742678070, ಧನರಾಜ ಮೊಬೈಲ್: 9482273969 ಅವರನ್ನು ನೇಮಿಸಲಾಗಿದೆ.

Latest Indian news

Popular Stories