ಕೊಡಗಿನಲ್ಲಿ ಕೋವಿಡ್ : ೨೪ ಗಂಟೆಗಳಲ್ಲಿ ನಾಲ್ವರ ಸಾವು Covid death

ಮಡಿಕೇರಿ ಏ.೨೨ : Covid death ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕಳೆದ ೨೪ ಗಂಟೆಗಳಲ್ಲಿ (ಗುರುವಾರ ಬೆಳಗ್ಗೆ ೮ ಗಂಟೆಯವರೆಗೆ) ನಾಲ್ವರು ಮೃಪಟ್ಟಿದ್ದು, ಇಲ್ಲಿಯವರೆಗಿನ ಸಾವಿನ ಸಂಖ್ಯೆ ೯೦ ಆಗಿದೆ.
ಮಡಿಕೇರಿ ನಗರ ಆಟೋ ಚಾಲಕರ ಸಂಘದ ಪ್ರಮುಖ ಸುಂದರ ಅವರು ಕೂಡ ಕೋವಿಡ್ ಗೆ ಬಲಿಯಾಗಿದ್ದು, ಆಟೋ ಮತ್ತು ಟ್ಯಾಕ್ಸಿ ಚಾಲಕರು ಆಘಾತ ವ್ಯಕ್ತಪಡಿಸಿದ್ದಾರೆ.
ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಮಾತ್ರವಲ್ಲದೆ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜಿಲ್ಲೆಯ ಜನರಲ್ಲಿ ಆತಂಕ ಮೂಡಿದ್ದು, ನಗರ ಹಾಗೂ ಪಟ್ಟಣಗಳಲ್ಲಿ ಜನ ಸಂಚಾರ ವಿರಳವಾಗಿದೆ.
ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ೮ ಗಂಟೆ ವೇಳೆಗೆ ೧೮೩ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿದೆ. ೧೩೮ ಆರ್.ಟಿ.ಪಿ.ಸಿ.ಆರ್ ಮತ್ತು ೪೫ ಪ್ರಕರಣಗಳು ರಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ.
ಮಡಿಕೇರಿ ತಾಲ್ಲೂಕಿನಲ್ಲಿ ೬೩, ಸೋಮವಾರಪೇಟೆ ೭೪ ಹಾಗೂ ವಿರಾಜಪೇಟೆ ತಾಲೂಕಿನಲ್ಲಿ ೪೬ ಹೊಸ ಕೋವಿಡ್-೧೯ ಪ್ರಕರಣಗಳು ಕಂಡು ಬಂದಿದೆ. ಜಿಲ್ಲೆಯಲ್ಲಿನ ಒಟ್ಟು ಕೋವಿಡ್-೧೯ ಪ್ರಕರಣಗಳ ಸಂಖ್ಯೆ ೭೩೬೫ ಆಗಿದ್ದು, ೬೫೩೯ ಮಂದಿ ಗುಣಮುಖರಾಗಿದ್ದಾರೆ.
೭೩೬ ಸಕ್ರಿಯ ಪ್ರಕರಣಗಳಿದ್ದು, ೯೦ ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ ೨೬೨ ಆಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದ್ದಾರೆ. ಫೋಟೋ :: ಸುಂದರ

Latest Indian news

Popular Stories