Bidar

ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ.ಎನ್. ಜಯ ಖಚಿತ

ಬೀದರ, ಏ. ೧೩ಃ ಇದೇ ದಿ. ೧೭ ರಂದು ನಡೆಯಲಿರುವ ಜಿಲ್ಲೆಯ ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ದಿವಂಗತ ಶಾಸಕ ಬಿ.

ನಾರಾಯಣರಾವ ಅವರ ಧರ್ಮಪತ್ನಿ ಶ್ರೀಮತಿ ಮಲ್ಲಮ್ಮಾ (ಮಾಲಾ) ಅವರ ಕಟ್ಟಿಟ್ಟ ಬುತ್ತಿಯಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಮಾಲಾ ಬಿ.ಎನ್. ಅವರ ಗೆಲುವಿಗೆ ದಿವಂಗತ ಶಾಸಕ ಬಿ.

ನಾರಾಯಣರಾವ ಅವರು ಬಸವಕಲ್ಯಾಣ ವಿಧಾನಸಭೆ ಮತಕ್ಷೇತ್ರದಲ್ಲಿ ಮಾಡಿದ ಜನಪರ ಕಾರ್ಯಗಳು ಶ್ರೀರಕ್ಷೆಯಾಗಲಿದೆ ಎಂದು ಹುಮನಾಬಾದ ಪಿ.ಎಲ್.ಡಿ.

ಬ್ಯಾಂಕ್ ಉಪಾಧ್ಯಕ್ಷರಾದ ಶರಣಬಸಪ್ಪ ಏಖ್ಖೇಳ್ಳಿ ಕಂದಗೂಳ, ಬಸವರಾಜ ಗಾಂಧಿನಗರ, ಅಪ್ಪಾರಾವ ಹಣಕುಣ , ವೈಜನಾಥ ಕಣಜಿ, ವಾಲ್ಕಿಕಿ ಸಮಾಜ ಜಿಲ್ಲಾಧ್ಯಕ್ಷರಾದ ಶರಣಪ್ಪ ಖಾಸಂಪೂರ, ರವೀಂದ್ರ ಗುಮಾಸ್ತಿ, ಸಂಜು ಖಾಸಂಪೂರ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಕಳೆದ ಒಂದು ವಾರಗಳ ಮತಕ್ಷೇತ್ರದ ಗ್ರಾಮ.

ತಾಂಡಾ ಮತ್ತು ಹಳ್ಳಿ ಹಳ್ಳಿಗಳಲ್ಲಿ ಶ್ರೀಮತಿ ಮಾಲಾ ಅವರಿಗೆ ಗೆಲ್ಲಿಸಿದರೆ, ದಿವಂಗತ ಶಾಸಕ ಬಿ. ನಾರಾಯಣರಾವ ಅವರಿಗೆ ಗೆಲ್ಲಿಸಿದಂತಾಗುತ್ತದೆ ಎಂದು ಮತದಾರರು ಹೇಳುತ್ತಿದ್ದಾರೆ. ಅಲ್ಲದೇ ತಮ್ಮ ತಮ್ಮ ಗ್ರಾಮದ ಸಮಸ್ಯೆಗಳಿಗೆ ಬಿ.

ನಾರಾಯಣರಾವ ಅವರು ಸ್ಪಂದಿಸಿದ ಬಗ್ಗೆ ಗ್ರಾಮಸ್ಥರು ಸ್ಮರಿಸುತ್ತಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಮಾರು ೪೫ ಸಾವಿರ ಮತಗಳ ಅಂತರದಿAದ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಮಾಜಿ ಸಚಿವರ ಹೇಳಿಕೆಗೆ ಖಂಡನೆ ಃ ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಕೋಲಿ, ಕಬ್ಬಲಿಗ, ಟೋಕರಿ ಕೋಲಿ ಸಮಾಜದ ಜನರು ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಲಿದ್ದಾರೆ ಎಂದು ಮಾಜಿ ಸಚಿವರು ಹಾಗೂ.

ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾದ ಬಾಬುರಾವ ಚಿಂಚನಸೂರು ಅವರ ಹೇಳಿಕೆಯನ್ನು ಕೋಲಿ, ಕಬ್ಬಿಲಿಗ, ಟೋಕರಿ ಕೋಲಿ ಸಮಾಜದ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.

ಕೋಲಿ, ಕಬ್ಬಿಲಿಗ, ಟೋಕರಿ ಕೋಲಿ ಸಮಾಜದವರು ಸಮಾಜದವರೇ ಚುನಾವಣೆಯಲ್ಲಿ ಸ್ಪರ್ಧಿಸಿದಾಗ, ಸಮಾಜದ ಅಭ್ಯರ್ಥಿಯನ್ನು ಬಿಟ್ಟು ಬೇರೆ ಪಕ್ಷದ ಅಭ್ಯರ್ಥಿಗೆ ಮತ ನೀಡುವುದಾದರೂ ಹೆಗೆ ಸಾಧ್ಯ.

ಹಿಂದುಳಿದ ವರ್ಗಗಳ ನಾಯಕರೇಂದೆ ಖ್ಯಾತರಾಗಿದ್ದ ದಿವಂಗತ ಶಾಸಕ ಬಿ. ನಾರಾಯಣರಾವ ಅವರು ಕೋಲಿ, ಕಬ್ಬಿಲಿಗ, ಟೋಕರಿ ಕೋಲಿ ಸಮಾಜದ ಪ್ರಮುಖ ನಾಯಕರಾಗಿದ್ದರು. ದಿವಂಗತ ಶಾಸಕ ಬಿ.

ನಾರಾಯಣರಾವ ಅವರ ಧರ್ಮಪತ್ನಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಮಾಲಾ ಅವರಿಗೆ ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆಯಲ್ಲಿ ಏಪ್ರೀಲ್ ೧೭ ರಂದು ಕೋಲಿ.

ಕಬ್ಬಿಲಿಗ, ಟೋಕರಿ ಕೋಲಿ ಸಮಾಜದವರು ತಮ್ಮ ಅಮೂಲ್ಯವಾದ ಮತ ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಿಸುವ ಮೂಲಕ ಇತಿಹಾಸ ರಚನೆ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button