ನಮ್ಮ ಬೀದರ ಯುವ ಚೇತನ ಅಭಿವೃದ್ಧಿ ಸಂಘದ ನಿರಾಶ್ರೀತರು, ಅಲೆಮಾರಿಗಳಿಗೆ ಆಹಾರ, ನೀರು ವಿತರಣೆ

ಬೀದರ, ಜೂ. ೦೭ ಃ ಕೋವಿಡ್-೧೯ ೨ನೇ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹಂತ ಹಂತವಾಗಿ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಬಡಜನರು, ನಿರಾಶ್ರೀತರು, ಭೀಕ್ಷÄಕರು, ಅಲೆಮಾರಿಗಳು ತೀವ್ರ ಸಂಕಷ್ಟದಲ್ಲಿರುವವರನ್ನು ಗುರುತಿಸಿ ನಮ್ಮ ಬೀದರ ಯುವ ಚೇತನ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಪ್ರದೀಪ ಕಾಂಬಳೆ ಅವರ ನೇತೃತ್ವದಲ್ಲಿ ಕಳೆದ ೨೧ ದಿನಗಳಿಂದ ಊಟದ ಪಾಕೇಟ್ ಮತ್ತು ನೀರಿನ ಬಾಟಲ್ ನೀಡಲಾಗುತ್ತಿದೆ.
ಕಳೆದ ೨೧ ದಿನಗಳಿಂದ ಪ್ರತಿನಿತ್ಯ ೫೦೦ ರಿಂದ ೮೦೦ ಕಡು ಬಡವರಿಗೆ ಆಹಾರ ವಿತರಣೆ ಮಾಡುವ ಮೂಲಕ ಮಾನವೀಯ ಕಾರ್ಯ ಮಾಡುತ್ತಿದೆ.
ನಮ್ಮ ಬೀದರ ಯುವ ಚೇತನ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಪ್ರದೀಪ ಕಾಂಬಳೆ ಅವರ ನೇತೃತ್ವದಲ್ಲಿ ಕಳೆದ ೨೧ ದಿನಗಳಿಂದ ಬೀದರ ನಗರದ ಗುಂಪಾ, ರೇಲ್ವೆ ನಿಲ್ದಾಣ, ಕೆ.ಇ.ಬಿ. ಹನುಮಾನ ಮಂದಿರ, ಗಾಂಧಿ ಗಂಜ, ಪಾಪವಿನಾಶ ಗೇಟ, ಬಸ್ ನಿಲ್ದಾಣ ಸೇರಿದಂತೆ ಹೀಗೆ ಹತ್ತು ಹಲವು ಪ್ರದೇಶಗಳಲ್ಲಿ ಸಂಚಿರಿಸಿ ವೇಜ್ ಪವಾಲ್ ಪಾಕೇಟ್ ಮತ್ತು ನೀರಿನ ಬಾಟಲ್ ವಿತರಣೆ ಮಾಡಲಾಗುತ್ತಿದೆ ಎಂದು ನಮ್ಮ ಬೀದರ ಯುವ ಚೇತನ ಅಭಿವೃದ್ಧಿ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕಾರ್ಯಕ್ರಮದಲ್ಲಿ ನಮ್ಮ ಬೀದರ ಯುವ ಚೇತನ ಅಭಿವೃದ್ಧಿ ಸಂಘದ ದಿಲೀಪ ಮಿಲ್ಕಾಸಿಂಗ, ರಜನಿಕಾಂತ ತಾರೆ, ಅಬ್ರಹಮ್, ಸೋಮನಾಥ ಆಯಾಸಪುರ, ಸೋಮು ಚಳಕಾಪೂರ, ಮಹೇಶ ಮೂರ್ತಿ, ಲಕ್ಷಿö್ಮÃಕಾಂತ ಗೂಡೆ, ನಗೇಶ ವರ್ಮಾ, ಪ್ರೀತಂ ಸಾಧೂರೆ, ಸುಶೀಲ ಬೆಳ್ಳೂರೆ, ಅಮರ, ರಾಹುಲ ಶಾಖೆ, ಆಕಾಶ ಕಾವೆ, ಹೇಮಂತ ಫುಲೇಕರ್, ರಜನಿಕಾಂತ ರಾಘಾಪೂರ, ಪ್ರಶಾಂತ ಹೂಗಾರ, ಜಯಕುಮಾರ ಹಾವೆ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.
ವಿಶ್ವ ಪರಿಸರ ದಿನಾಚರಣೆ
ನಮ್ಮ ಬೀದರ ಯುವ ಚೇತನ ಅಭಿವೃದ್ದಿ ಸಂಘ, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಹಾರೂರಗೇರಿ ಬಡಾವಣೆಯಲ್ಲಿ ೧೦೦ ಸಸಿಗಳನ್ನು ನೇಡುವುದರ ಮೂಲಕ ವಿಶ್ವ ಪರಿಸರ ದಿನ ಕೋವಿಡ್-೧೯ ಕಾರಣದಿಂದಾಗಿ ಸರಳವಾಗಿ ಆಚಾರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪ್ರದೀಪ ಕಾಂಬಳೆ ಅವರು ಮಾತನಾಡುತ್ತ, ಪರಿಸರ ನಾಶದಿಂದ ಉಸಿರಾಟದ ಆಮ್ಲಜನಕಕ್ಕೂ ಹಣ ನೀಡುವ ಪರಿಸ್ಥಿತಿ ಉಂಟಾಗಿದೆ. ಆಮ್ಲಜನಕದ ಸಿಲೆಂಡರಗಳಿಗಾಗಿ ಪರದಾಡಬೇಕಾಗಿದೆ. ಮುಂದಿನ ಪಿಳಿಗೆಗಾಗಿ ಪರಿಸರ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಯಾಗಬೇಕಾಗಿದೆ. ಕೆವಲ ಒಂದು ದಿನಕ್ಕೆ ಪರಿಸರ ದಿನವನ್ನು ಆಚರಿಸದೇ ದಿನದ ಪ್ರತಿ ಪರಿಸರ ಬಗ್ಗೆ ಕಾಳಜಿ ತೊರಿಸುವುದನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.

Latest Indian news

Popular Stories