ಮೈಕ್ರೋ ವೀಕ್ಷಕರಿಗೆ ಚುನಾವಣಾ ತರಬೇತಿ ಬೀದರ

ಬೀದರ ಏಪ್ರೀಲ್ ೧೨ (ಕ.ವಾ.): ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆಯ ಹಿನ್ನೆಲೆಯಲ್ಲಿ ನೇಮಕಗೊಂಡ ಮೈಕ್ರೋ ವೀಕ್ಷಕರಿಗೆ ಸಾಮಾನ್ಯ ಚುನಾವಣೆಯ ವೀಕ್ಷಕರಾದ, ಐಎಎಸ್ ಅಧಿಕಾರಿ ಅಲೋಕ ಗುಪ್ತ ಅವರ ಸಮ್ಮುಖದಲ್ಲಿ ಏಪ್ರೀಲ್ ೧೨ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತರಬೇತಿ ನಡೆಯಿತು.

ಈ ವೇಳೆ ಚುನಾವಣಾ ವೀಕ್ಷಕರಾದ ಅಲೋಕ ಗುಪ್ತ ಅವರು ಮಾತನಾಡಿ, ಮೈಕ್ರೋ ವೀಕ್ಷಕರು ಜಾಗೃತೆಯಿಂದ ಕೆಲಸ ನಿರ್ವಹಿಸಬೇಕು.

ಚುನಾವಣಾ ಪ್ರಕ್ರಿಯೆಯಲ್ಲಿ ಏನಾದರು ಲೋಪದೋಷಗಳು ಕಂಡು ಬಂದರೆ ಕೂಡಲೇ ವರದಿ ಮಾಡಬೇಕು ಎಂದು ತಿಳಿಸಿದರು.

ಚುನಾವಣೆ ವ್ಯವಸ್ಥೆಯಲ್ಲಿನ ವೀಕ್ಷಣೆಯನ್ನು ಬಲಪಡಿಸುವುದಕೋಸ್ಕರ ಸೂಕ್ಷö್ಮ ಮತ್ತು ಅತೀ ಸೂಕ್ಷö್ಮ ಮತಗಟ್ಟೆಗಳಲ್ಲಿ ಮಾತ್ರ ಮೈಕ್ರೋ ವೀಕ್ಷಕರನ್ನು ನೇಮಿಸಲಾಗುತ್ತದೆ.

ಮತದಾನ ದಿನದಂದು ನಡೆಯುವ ಅಣುಕು ಮತದಾನ, ಪೋಲಿಂಗ್ ಏಜೆಂಟ್ ನೇಮಕ ಸೇರಿದಂತೆ ಎಲ್ಲಾ ಚುನಾವಣಾ ಪ್ರಕ್ರಿಯೆಗಳನ್ನು ಸೂಕ್ಷö್ಮವಾಗಿ ಅವಲೋಕಿಸಿ ಸಾಮಾನ್ಯ ಚುನಾವಣಾ ವೀಕ್ಷಕರಿಗೆ ವರದಿ ಮಾಡಬೇಕು ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಮಾತನಾಡಿ, ಮೈಕ್ರೋ ವೀಕ್ಷಕರನ್ನಾಗಿ ಕೇಂದ್ರ ಸರ್ಕಾರದ ನೌಕರರನ್ನು ನೇಮಿಸಲಾಗುತ್ತದೆ.

ಮೈಕ್ರೋ ವೀಕ್ಷಕರು ಸಾಮಾನ್ಯ ಚುನಾವಣಾ ವೀಕ್ಷಕರ ಅಧೀನದಲ್ಲಿ ಕೆಲಸ ಮಾಡಬೇಕು. ಮತಗಟ್ಟೆಗಳಲ್ಲಿನ ಮೂಲಸೌಕರ್ಯ ಕುರಿತು ಸೂಕ್ಷö್ಮವಾಗಿ ಅವಲೋಕಿಸಿ ವರದಿ ನೀಡಬೇಕು. ಮತದಾನ ದಿನದಂದು ಅಹಿತಕರ ಘಟನೆಗಳು ನಡೆದಲ್ಲಿ ತಕ್ಷಣವೇ ವರದಿ ಮಾಡಬೇಕು ಎಂದು ತಿಳಿಸಿದರು.

ರಾಜ್ಯಮಟ್ಟದ ಮಾಸ್ಟರ್ ಟ್ರೇನರ್ ಗೌತಮ ಅರಳಿ ಅವರು ಮೈಕ್ರೋ ವೀಕ್ಷಕರ ಕರ್ತವ್ಯಗಳ ಬಗ್ಗೆ ತಿಳಿಸಿದರು.

Latest Indian news

Popular Stories