ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಿ:- ಸಚಿವ ಈಶ್ವರ ಬಿ. ಖಂಡ್ರೆ

ಬೀದರ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಬೇಕೆಂದು ಅರಣ್ಯ ಪರಿಸರ ಮತ್ತು ಜೀವಿಶಾಸ್ತç ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಹೇಳಿದರು.

ಅವರು ಶನಿವಾರ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಪ್ರಗತಿ ಪರಶೀಲನೆ ಸಭೆ ನಡೆಸಿ ಮಾತನಾಡಿದರು. ಕುಡಿಯುವ ನೀರು ಜೀವ-ಜಲ ಹಾಗಾಗಿ ನನ್ನ ಉಸ್ತುವಾರಿಯಲ್ಲಿ ನೀರಿನ ಸಮಸ್ಯೆಯಾಗಬಾರದು. ಒಂದು ವೇಳೆ ಆದರೆ ಅದನ್ನು 24 ಗಂಟೆಗಳಲ್ಲಿ ಬಗೆಹರಿಸಬೇಕು. ಮಳೆ ಬರದಿದ್ದರೆ ಜಿಲ್ಲೆಯ 185 ಗ್ರಾಮ ಪಂಚಾಯತಿಗಳು, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಮುಂಜಾಗೃತೆ ವಹಿಸಬೇಕೆಂದರು. ಎಸ್.ಟಿ.ಪಿಗೆ ಪ್ರಥಮ ಆದ್ಯತೆ ನೀಡಿದರೆ ನೀರು ಕಲುಷಿತವಾಗುವುದಿಲ್ಲ. ಎಸ್.ಟಿ.ಪಿ ಮೂರು ಚಾಲ್ತಿಯಲ್ಲಿರಬೇಕು ಮತ್ತು ಕೆಆರ್‌ಇ ಸಂಸ್ಥೆ ಎದುರಿಗೆ ಡಂಪ್ ಮಾಡಿರುವ ಕಸವನ್ನು ಬೆರೆ ಕಡೆಗೆ ಸಾಗಿಸುವ ವ್ಯವಸ್ಥೆಯಾಗಬೇಕು ಅಲ್ಲಿನ ಮಕ್ಕಳಿಗೆ ದುರ್ವಾಸನೆ ಬರುತ್ತಿದೆ ಎಂದು ನಗಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಹಿಂದೆ ಸಭೆ ಮಾಡಿದ್ದೆ ಅದು ಎಷ್ಟರಮಟ್ಟಿಗೆ ಅನುಷ್ಟಾನ ಆಗಿದೆ. ಈಗ ಜಿಲ್ಲೆಯಾದ್ಯಂತ ಇರುವ ಜ್ವಲಂತ ಸಮಸ್ಯೆಗಳು ಎನಿವೆ ಎನ್ನುವುದರ ಕುರಿತು ಇಂದು ಸಭೆ ಮಾಡುತ್ತಿದ್ದೆನೆ. ಈಗಾಗಲೇ ಮಳೆಯ ಕೊರತೆ ಇದ್ದು ಕೃಷಿ ಇಲಾಖೆಯಿಂದ ಎಷ್ಟು ಬೀಜ ವಿತರಣೆ ಮಾಡಲಾಗಿದೆ, ಬಿತ್ತನೆ ಎಷ್ಟು ಮಾಡಿದ್ದಾರೆ ಮತ್ತು ಹವಾಮಾನ ಇಲಾಖೆಯಿಂದ ಮಳೆಯ ಮುನ್ನೂಚನೆ ಎನಿದೆ ಎಂಬ ಮಾಹಿತಿಯನ್ನು ಸಚಿವರು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಂದ ಪಡೆದರು.


ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿAದ ಜಿಲ್ಲೆಯಲ್ಲಿ ಎಷ್ಟು ಕೆಲಸಗಳು ನಡೆಯುತ್ತಿವೆ ಮೈಕ್ರೋ ಮತ್ತು ಮ್ಯಾಕ್ರೋದಲ್ಲಿ ಏನಾದರು ಕಾಮಗಾರಿಗಳಿ ಬಾಕಿ ಇವೆ ಎಂದು ಸಂಬAದಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಕೆಕೆಆರ್‌ಡಿಬಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ನಿಯಮಾನುಸಾರ ಭರ್ತಿ ಮಾಡುವಂತೆ ಸಂಬAದಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಈ ಸಭೆಯಲ್ಲಿ ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್, ವಿಧಾನ ಪರಿಷತ ಸದಸ್ಯ ಅರವಿಂದಕುಮಾರ ಅರಳಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ. ಎಂ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಬಸವಕಲ್ಯಾಣ ಮತ್ತು ಬೀದರ ಸಹಾಯಕ ಆಯುಕ್ತರು, ಸ್ಭೆರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Latest Indian news

Popular Stories