ಕಾಂಗ್ರೆಸ್‌ನವರು ಗಲಭೆ ಹುಟ್ಟುಹಾಕ್ತಿದ್ದಾರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪದ ವಿಚಾರವಾಗಿ ಇಂದು ಬೀದರ್ ನಲ್ಲಿ ರಾಜ್ಯ ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ರಿಯಾಕ್ಟ್ ಮಾಡಿದ್ದು,ಇವತ್ತು ಇಡೀ ರಾಜ್ಯದಲ್ಲಿ ಯಾರೂ ಗಲಭೆ ಯಾರು ಸೃಷ್ಟಿ ಮಾಡ್ತಿದ್ದಾರೆ.ಅದಕ್ಕೆ ಪ್ರಹ್ಲಾದ ಜೋಶಿ ಅವರೇ ಉತ್ತರ ಕೊಡಬೇಕು.
ಜಾತಿ-ಜಾತಿಗಳಲ್ಲಿ ವೈಷಮ್ಯ ಯಾರು ಸೃಷ್ಟಿ ಮಾಡ್ತಾ ಇದಾರೆ.ದಂಗೆಗಳನ್ನ ಯಾರು ನಡೆಸ್ತಾ ಇದಾರೆ.ಇದಕ್ಕೆಲ್ಲಾ ಜೋಶಿ ಉತ್ತರ ಕೊಡಲಿ ನೋಡೊಣ.ಅವರೇ ಅಪರಾಧ ಮಾಡೋರು, ಅವರೆ ಬೊಬ್ಬೆ ಹೊಡೆಯೋರು.ಮತ್ತೆ ಅವರೇ ಕ್ರಮ ತೆಗೆದುಕೊಳ್ಳಿ ಒತ್ತಾಯ ಮಾಡೋರು.ಜನ ಎಲ್ಲವನ್ನು ನೊಡ್ತಾ ಇದಾರೆ, ಎಲ್ಲವೂ ಜನರಿಗೆ ಗೊತ್ತಾಗುತ್ತೆ ಎಂದು ಜೋಶಿ ಮಾತಿಗೆ ಟಾಂಗ್ ಕೊಟ್ಟಿದ್ದಾರೆ.
ಮೋದಿ ಎದುರು ನಿಲ್ಲುವ ತಾಕತ್ತು ಖೂಬಾ ಅವರಿಗಿದೇಯಾ : ಬೀದರ್ ನಲ್ಲಿ ಖಂಡ್ರೆ ವಾಗ್ದಾಳಿ
ಇಂದು ಬೀದರ್‌ನಲ್ಲಿ ಸಚಿವ ಈಶ್ವರ ಖಂಡ್ರೆ ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ದ ಕಿಡಿಕಾರಿದ್ದು ಬೀದರ್ ಟು ಬೆಂಗಳುರು ವಿಮಾನಸೇವೆ ಬಂದ್ ಆಗಿರೋದರ ಕುರಿತು ಕೇಂದ್ರ ಸಚಿವರಾಗಿ ಒಂದು ಮಾತಾಡಿಲ್ಲಾ.ಆದ್ರೆ ನಾನು ವಿಮಾನಸೇವೆ ಆರಂಭಿಸಬೇಕು ಅಂತಾ ಎಮ್‌ಬಿ ಪಾಟೀಲ ಅವರಿಗೆ ಸಭೆ ಕರೆಯಲು ಹೇಳಿದ್ದೇನೆ.
ಸಿಪೆಟ್ ಕಾಲೇಜು ಸ್ಥಾಪನೆ ಮಾಡ್ತೇವೆ ಅಂತಾ ಹೇಳಿದ್ರು, ಆದ್ರೆ ಬೇಕಾದ ಹುದ್ದೆಗೆ ಸೀತಾರಾಮನ್ ಅನುಮೋದನೆನೆ ಕೊಟ್ಟಿಲ್ಲಾ.
ತರಬೇತಿ ಕೋಡ್ತೆವಿ ಅಂತಾ ಒಂದು ರೂಮ್ ತುಗೊಂಡು ಖೂಬಾ ನಾಟಕ ಮಾಡಿದ್ದಾರೆ ಕರ್ನಾಟಕಕ್ಕೆ ಜಿಎಸ್‌ಟಿ, ಬರ ಪರಿಹಾರದಲ್ಲಿ ಮೋಸ ಆಗಿದೆ.ಅದರ ಕುರಿತಾಗಿ ಲೋಕಸಭೆಯಲ್ಲಿ ಒಮ್ಮೆಯಾದ್ರು ಧ್ವನಿ ಎತ್ತಿದ್ದಿರಾ…? ಎಂದು
ಕೇಂದ್ರ ಸಚಿವ ಖೂಬಾಗೆ ಪ್ರಶ್ನೆಯನ್ನು ಮಾಡಿದ್ದಾರೆ.
ಕರ್ನಾಟಕದ ಹಲವು ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ.ಅವುಗಳ ಕುರಿತು ಒಮ್ಮೆಯೂ ಮಾತಾನಾಡಿಲ್ಲ ಮೋದಿ ಅವರ ಎದುರು ನಿಲ್ಲುವ ತಾಕತ್ತು ಖೂಬಾ ಅವರಿಗಿದೇಯಾ…?15 ನೇ ಹಣಕಾಸು ಯೋಜನೆಯಲ್ಲಿ ಕರ್ನಾಟಕಕ್ಕೆ ಬರಬೇಕಾದ ಹಣ ಬಂದಿಲ್ಲಾ.ರಾಜ್ಯಕ್ಕೆ ಬರಬೇಕಾದ ಪರ್ಸಂಟೇಜ್ ಕಡಿಮೆ ಮಾಡಿದಾಗ ಸಂಸದರು ಮಾತಾಡಿದ್ರಾ…?
ಬಿಜೆಪಿಯವರು ಒಂದಾದ್ರೂ ಹೇಳಿರೊ ಭರವಸೆ ಈಡೇರಿಸಿದ್ರಾ..ಆದ್ರೆ ಕಾಂಗ್ರೆಸ್‌ನವರು ತಮ್ಮ ಗ್ಯಾರಂಟಿಗಳನ್ನ ಈಡೇರಿಸಿದ್ದೇವೆ.
ಕಾಂಗ್ರೆಸ್ ಬಗ್ಗೆ ಮಾತಾಡಲು ಬಿಜೆಪಿಯವರಿಗೆ ನೈತಿಕತೆ ಇಲ್ಲಾ.ನಿಮ್ಮವರೇ ನಿಮಗೆ ಛೀ ತೂ ಅಂತಿದಾರೆ ಎಂದು ಕೇಂದ್ರ ಸಚಿವರ ವಿರುದ್ದ ಕಿಡಿಕಾರಿದರು.
ಬಗಲಲ್ಲಿ ಬಡಿಗೆ ಹಿಡಿದುಕೊಂಡು ಜೈ ಶ್ರೀರಾಮ ಘೋಷಣೆ ಕುಗೊದು ಸರಿಯಲ್ಲಾ
ಬಸವಣ್ಣನವರನ್ನ ಸಾಂಸ್ಕೃತಿಕ ನಾಯಕ ಘೋಷಣೆ ವಿಚಾರವಾಗಿ ಬೀದರ್ ನಲ್ಲಿ ಮಾಧ್ಯಮದವರಿಗೆ ರಿಯಾಕ್ಟ ಮಾಡಿದ ಸಚಿವ ಈಶ್ವರ ಖಂಡ್ರೆ ನಾವೇನು ರಾಜಕೀಯಕ್ಕಾಗಿ ಘೋಷಣೆ ಮಾಡಿಲ್ಲಾ.ಬುದ್ದ ಬಸವ ಅಂಬೇಡ್ಕರ್ ತತ್ವಾದರ್ಶಗಳ ಮೇಲೆ ಹಲವು ಕಾರ್ಯಕ್ರಮ ಕೊಟ್ಟಿದ್ದೇವೆ.ಜನ ನಮ್ಮನ್ನ ನಂಬಿದ್ದಾರೆ.ಒಳ್ಳೆಯ ಆಡಳಿತ ನೀಡ್ತೆವೆ.ಜನರಿಗೆ ಭಯ ಮೂಡಿಸುವ ಕೆಲಸ ಬಿಜೆಪಿಯವರು ಮಾಡ್ತಾ ಇದ್ದಾರೆ.ರಾಮ ಎಲ್ಲರಿಗೂ ಆದರ್ಶ,ಎಲ್ಲರಿಗೂ ಉತ್ತಮ ಆಡಳಿತ ನೀಡಬೇಕು ಅನ್ನೊದು ರಾಮರಾಜ್ಯದ ಉದ್ದೇಶ.ಧರ್ಮ ಧರ್ಮದ ನಡುವೆ ದ್ವೇಷ ಹುಟ್ಟಿಸೊದು ದ್ವೇಷ ರಾಜ್ಯ.ಬಗಲಲ್ಲಿ ಬಡಿಗೆ ಹಿಡಿದುಕೊಂಡು ಜೈ ಶ್ರೀರಾಮ ಘೋಷಣೆ ಕುಗೊದು ಸರಿಯಲ್ಲಾ ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು.