ಫೆ. 4 ರಂದು ಹಲವೆಡೆ ವಿದ್ಯುತ್ ವ್ಯತ್ಯಯ

ಬೀದರ್ : ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಬೀದರ ವಿಭಾಗದ ಚಿದ್ರಿ ಉಪಕೇಂದ್ರ 110/11ಕೆ.ವಿ. ಚಿದ್ರಿ ಫೀಡರನ ಮೇಲೆ ತುರ್ತು ಕಾರ್ಯ ಇರುವುದರಿಂದ ದಿನಾಂಕ: 04-02-2024 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಈ ಕೆಳಕಂಡAತೆ ವಿದ್ಯುತ್ ವ್ಯತ್ಯಯವಾಗಲಿದೆ.

110/11 ಕೆ.ವಿ. ಉಪಕೇಂದ್ರದಿAದ ಪ್ರಾರಂಭವಾಗುವ 11 ಕೆ.ವಿ ಫೀಡರ್‌ಗಳಾದ ಅಮಲಾಪೂರ, ಚಿದ್ರಿ, ಏರಫೋರ್ಸ್, ಟೌನ್, ಗುರು ನಗರ, ಸಿದ್ದಾರ್ಥ, ಬಸವ ನಗರ, ಮಂಗಲಪೇಟ್, ಬ್ರೀಮ್ಸ್, ಗಾಂಧಿ ಗಂಜ, ಫೈಜಪೂರ, ಗುಂಪಾ, ಮೈಲೂರು ಹಾಗೂ ಕೆ.ಇ.ಬಿ. ಕ್ವಾಟರ್ಸ್ ಫೀಡರಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜೀನಿಯರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories