ಕರ ವಸೂಲಾತಿ ಅಭಿಯಾನದಿಂದ 3.58 ಕೋಟಿ ರೂ. ವಸೂಲಿ

ಬೀದರ : ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕರ ವಸೂಲಾತಿಯನ್ನು ನಿಗದಿಪಡಿಸಿದ ಗುರಿಕ್ಕಿಂತ ಕಡಿಮೆ ಪ್ರಗತಿ ಸಾಧಿಸಿರುವದರಿಂದ ಹೆಚ್ಚಿನ ಪ್ರಗತಿ ಸಾಧಿಸಲು ಗ್ರಾಮ ಪಂಚಾಯತ್ ಕರವಸೂಲಾತಿ ಅಭಿಯಾನವನ್ನು ದಿನಾಂಕ 21-01-2024 ರಿಂದ 31-01-2024ರ ವರೆಗೆ ಎಲ್ಲಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕರವಸೂಲಿಗಾರರು, ಸ್ವಸಹಾಯ ಸಂಘದ ಮಹಿಳೆಯರ ಸಹಕಾರದಿಂದ ಮನೆ ಮನೆಗೆ ಭೇಟಿ ನೀಡಿ ಕರವಸೂಲಾತಿ ಪ್ರಮಾಣವನ್ನು ಹೆಚ್ಚಿಸಲು ನೋಡಲ್ ಅಧಿಕಾರಿಗಳ ತಂಡವನ್ನು ರಚಿಸಿ ಆದೇಶಿಸಲಾಗಿತ್ತು.

ಆದರಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕರ ವಸೂಲಿಗಾರರು, ಸ್ವ-ಸಹಾಯ ಸಂಘದ ಮಹಿಳೆಯರ ಸಹಕಾರದಿಂದ ಮನೆ ಮನೆಗೆ ಭೇಟಿ ನೀಡಿ ಕರ ವಸೂಲಾತಿಯನ್ನು ಮಾಡಿರುತ್ತಾರೆ. ಕರ ವಸೂಲಾತಿ ಅಭಿಯಾನ ಮಾಡುವ ಮುಂಚೆ ಜಿಲ್ಲೆಯಲ್ಲಿ 3.15 ಕೋಟಿ ಕರ ವಸೂಲಾತಿ ಮಾಡಲಾಗಿತ್ತು. ಆದರೆ ಕರ ವಸೂಲಾತಿ ಅಭಿಯಾನ ಮಾಡಿದ ನಂತರ ಕೇವಲ 11 ದಿನಗಳಲ್ಲಿ 3.58 ಕೋಟಿ ರೂ.ಗಳನ್ನು ಕರ ವಸೂಲಿಯಾಗಿರುತ್ತದೆ.

ವಸೂಲಿಯಾಗಿರುವ ಮೊತ್ತವನ್ನು ಪಂಚಾಯತ್ ನಿಧಿಗೆ ಜಮೆ ಮಾಡಿ ಮೂಲಭೂತ ಸೌಕರ್ಯಕ್ಕಾಗಿ ಉಪಯೋಗಿಸಲಾಗುವುದು. ಹಾಗೂ ಈ ಅಭಿಯಾನವನ್ನು ದೊಡ್ಡ ಪ್ರಮಾಣದಲ್ಲಿ ಕರ ವಸೂಲಾತಿ ಮಾಡಲು ಕಾರಣಿಭೂತರಾದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕರವಸೂಲಾತಿಗಾರರು ಮತ್ತು ಸ್ವಸಹಾಯ ಸಂಘದ ಮಹಿಳೆಯರು ಹಾಗೂ ಎಲ್ಲಾ ಗ್ರಾಮದ ಸಾರ್ವಜನಿಕರಿಗೆ ತುಂಬು ಹೃದಯದಿಂದ ಅಭಿನಂದನೆ ಸಲ್ಲಿಸುತ್ತೇನೆ ಹಾಗೂ ಇದೇ ರೀತಿ ಕರವಸೂಲಾತಿ ಮುಂದುವರೆಸಿಕೊAಡು ಹೋಗಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories