ಅರಣ್ಯ ಪ್ರದೇಶ ಒತ್ತುವರಿ ತೆರವು ಕಾರ್ಯಾಚರಣೆ – ಬುಲ್ಡೋಝರ್ ಸದ್ದು

ಬೀದರ್ : ಅರಣ್ಯ ಸಚಿವ ಈಶ್ವರ ಖಂಡ್ರೆ ತವರು ಜಿಲ್ಲೆ ಬೀದರ್‌ನಲ್ಲಿ ಅರಣ್ಯ ಪ್ರದೇಶ ಒತ್ತುವರಿ ತೆರವು ಕಾರ್ಯಾಚರಣೆಯನ್ನ ಅರಣ್ಯ ಇಲಾಖೆ ಅಧಿಕಾರಿಗಳು ಮುಂದುವರೆಸಿದ್ದು, ಇಂದು ಬೀದರ್ ನಗರದ ಶಹಾಪುರ ಗೇಟ್ ಬಳಿ ಒತ್ತುವರಿಯಾಗಿದ್ದ 104 ಎಕರೇ ಅರಣ್ಯ ಪ್ರದೇಶ ತೆರವಿಗೊಳಿಸಲು ಮುಂದಾಗಿದ್ದಾರೆ.

ಬೆಳ್ಳಂಬೆಳಗ್ಗೆ ಬುಲ್ಡೊಜರ್ ಮೂಲಕ ತೆರವು ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ‌ ಸಿಬ್ಬಂದಿ ಶಹಾಪುರ ಗೇಟ್ ಬಳಿ ಸರ್ವೆ ನಂಬರ್ 98, 102, 104, ಹಾಗು 106 ನಂಬರ್‌ನ ಒಟ್ಟು 104 ಎಕರೆ ಅರಣ್ಯ ಪ್ರದೇಶ ತೆರವು‌ ಕಾರ್ಯಾಚರಣೆ ನಡೆಸಿದ್ರು. ಅಕ್ರಮವಾಗಿ ಶೆಡ್ ನಿರ್ಮಿಸಿ,ಲೇಔಟ್ ಮಾಡಿಕೊಂಡಿದ್ದ ಸ್ಥಳವನ್ನ ತೆರವುಗೊಳಿಸಿ ಅರಣ್ಯ ಇಲಾಖೆಯ ಸುಪರ್ದಿಗೆ ತೆಗೆದುಕೊಂಡರು. ಡಿಎಫ್‌ಓ ವಾಣತಿ ಎಮ್‌‌ಎಮ್ ಆದೇಶದ ಮೇರೆಗೆ ಅರಣ್ಯಾಧಿಕಾರಿಗಳಾದ ಮಹೇಂದ್ರಕುಮಾರ್ ಹಾಗೂ ರವಿ ಸಮ್ಮುಖದಲ್ಲಿ ತೆರವು ಕಾರ್ಯಾಚರಣೆ ನಡೆಸಿದರು.

ಹನುಮಂತ ದೇಶಮುಖ
THG ಬೀದರ್

Latest Indian news

Popular Stories