ಮಿನಿ ಉದ್ಯೋಗ ಮೇಳ ಆಗಸ್ಟ್.18

ಬೀದರ ಅಗಸ್ಟ್.10 (ಕರ್ನಾಟಕ ವಾರ್ತೆ): ಜಿಲ್ಲಾ ಕೌಶಲ್ಯ ಮಿಷನ್ ಅಡಿಯಲ್ಲಿ ಕೌಶಲ್ಯಾಭಿವೃದ್ಧಿ, ಜೀವನೋಪಾಯ ಹಾಗೂ ಉದ್ಯಮಾಶೀಲತೆ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಆಗಸ್ಟ್.18 ರಂದು ಬೆಳಿಗ್ಗೆ 10 ರಿಂದ ಸಾಯಂಕಾಲ 5.30 ರವರೆಗೆ ಮಿನಿ ಉದ್ಯೋಗ ಮೇಳವನ್ನು ಜಿಲ್ಲಾ ಉದ್ಯೋಗ ಮಿನಿಮಯ ಕಛೇರಿ, ಸರ್ಕಾರಿ ಐಟಿಐ ಕಾಲೇಜು, ಎಂ.ಎಸ್.ಪಾಟೀಲ್ ಪಂಕ್ಷನ್ ಹಾಲ್ ಹಿಂದುಗಡೆ, ಕುಂಬಾರವಾಡ ಕ್ರಾಸ್, ಮನ್ನಳ್ಳಿ ರೋಡ, ಗುಂಪಾ ರಸ್ತೆ, ಬೀದರ ಇಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಸ್.ಎಸ್.ಎಲ್.ಸಿ., ಪಿಯುಸಿ, ಐಟಿಐ ಡಿಪ್ಲೋಮಾ ಹಾಗೂ ಪದವಿ ಹೊಂದಿರುವ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.
ಆಸಕ್ತ ಆಭ್ಯರ್ಥಿಗಳು ಅನ್‌ಲೈನ್ https://tinyurl.com/22k7cphdಲಿಂಕ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ತಿಳಿಸಿದೆ.
ಈ ಮಿನಿ ಉದ್ಯೋಗ ಮೇಳದಲ್ಲಿ 25 ಕ್ಕೂ ಹೆಚ್ಚಿನ ಖಾಸಗಿ ಕಂಪನಿಗಳು ಭಾಗವಹಿಸುತ್ತಿವೆ. 500ಕ್ಕೂ ಹೆಚ್ಚು ಉದ್ಯೋಗಾವಕಾಶಗಳಿರುತ್ತದೆ. ಕೋವಿಡ್-19 ನಿಯಮಗಳು ಸಾರ್ವಜನಿಕರು ಕಡ್ಡಾಯವಾಗಿ ಪಾಲನೆ ಮಾಡಲು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ: ಮೊ.ನಂ. 9483977971, 8073241315 ಗೆ ಸಂಪರ್ಕಿಸಬಹುದು.

Latest Indian news

Popular Stories