
48 ಗಂಟೆಯಲ್ಲಿ ಪಕ್ಷಗಳ ಅಪರಾಧಿಕ ಹಿನ್ನಲೆ ಇರುವ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲು ಸುಪ್ರೀಮ್ ಸೂಚನೆ!
ನವದೆಹಲಿ: ಸುಪ್ರೀಮ್ ಕೋರ್ಟ್ 2020 ರ ಫೆಬ್ರವರಿಯಲ್ಲಿ ಕೊಟ್ಟ ತೀರ್ಪನ್ನು ಪುನರ್ ಪರಿಶೀಲಿಸಿ ಕ್ರಿಮಿನಲ್ ಹಿನ್ನಲೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡದ ಕಾರಣಕ್ಕಾಗಿ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಅದರೊಂದಿಗೆ ಸರ್ವೊಚ್ಚ ನ್ಯಾಯಾಲಯ ಸಂಸತ್ತನ್ನು ಎಚ್ಚರಿಸಿ ಜನರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಹಲವು ಪ್ರಮುಖ ಪಕ್ಷಗಳ ಮೇಲೆ ದಂಡ ವಿಧಿಸಿದೆ. ಅದರೊಂದಿಗೆ 48ಯ ಒಳಗೆ ಪಕ್ಷದ ವೆಬ್ಸೈಟ್ ನಲ್ಲಿ ಕ್ರಿಮಿನಲ್ ಹಿನ್ನಲೆಯ ಅಭ್ಯರ್ಥಿಗಳ ಕುರಿತು ಪಟ್ಟಿ ಬಿಡುಗಡೆ ಮಾಡಬೇಕು. ಮತ್ತು ವೆಬ್ಸೈಟ್ ಮುಖಪುಟದಲ್ಲಿ ಕ್ರಿಮಿನಲ್ ಹಿನ್ನಲೆಯುಳ್ಳ ಅಭ್ಯರ್ಥಿಗಳ ಪಟ್ಟಿಯೆಂದು ಉಲ್ಲೇಖಿಸಲು ತಾಕೀತು ಮಾಡಿ ಆದೇಶ ಹೊರಡಿಸಿದೆ.
ಫೆಬ್ರವರಿ ತೀರ್ಪು ಉಲ್ಲಂಘಿಸಿದ ನ ಬಿಜೆಪಿ, ಕಾಂಗ್ರೆಸ್, ಜೆಡಿಯು, ಆರ್ಜೆಡಿ, ಲೋಕ ಜನಶಕ್ತಿ ಪಕ್ಷ ಮತ್ತು ಭಾರತೀಯ ಕಮ್ಯುನಿಸ್ಟ್ ಪಕ್ಷದ ಒಂದು ಲಕ್ಷ ದಂಡ ವಿಧಿಸಿದೆ.ಎನ್.ಸಿ.ಪಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕಿಸ್ಟ್) ಮೇಲೆ ಸಂಪೂರ್ಣ ಉಲ್ಲಂಘನೆಗಾಗಿ ಐದು ಲಕ್ಷ ದಂಡ ವಿಧಿಸಿದೆ.




