ಬೀದರ್ : ನಸುಕಿನ ಜಾವ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ, ಬಸವಕಲ್ಯಾಣದಲ್ಲಿ ಕೋಟಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಬಸವಕಲ್ಯಾಣದ ಈಶ್ವರ ನಗರದಲ್ಲಿರುವ ಖುರ್ಷಿದ್ ಫಿಲ್ಟರ್, ಉಮರ್ ಫರ್ನಿಚರ್, ಕೆಕೆ ಫರ್ನಿಚರ್ ರಶೀದ್ ಫರ್ನಿಚರ್, ಸೇರಿದಂತೆ ಒಟ್ಟು ಐದು ಅಂಗಡಿಗಳು ಅಗ್ನಿ ಅವಘಡಕ್ಕೆ ಸುಟ್ಟು ಕರಕಲಾಗಿವೆ.
ಅಗ್ನಿ ಅವಘಡದಿಂದಾಗಿ ಅಂಗಡಿಗಳಲ್ಲಿದ್ದ ಫರ್ನಿಚರ್ ಐಟಮ್, ಮಷೀನ್ಸ್ ಸೇರಿದಂತೆ ದುಬಾರಿ ವಸ್ತುಗಳು ಸುಟ್ಟು ಕರಕಲಾಗಿವೆ. ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಡೌಡಾಯಿಸಿದ್ದು, ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಶಾಸಕ ಶರಣು ಸಲಗರ್ ಭೇಟಿ ನೀಡಿ, ಅಂಗಡಿ ಮಾಲೀಕರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ 50,000 ಸಹಾಯಧನವನ್ನ ನೀಡಿದ್ದಾರೆ. ಅಲ್ಲದೇ ಸ್ಥಳದಲ್ಲಿ ನಿಂತು ಸಚಿವ ರಹೀಮ್ ಖಾನ್ ಅವರಿಗೆ ದೂರವಾಣಿ ಸಂಪರ್ಕ ಮಾಡಿ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಂಗಡಿ ಮಾಲೀಕರಿಗೆ ಸರ್ಕಾರದಿಂದ ಸಹಾಯಧನ ನೀಡಿ ಎಂದು ಸಚಿವರಲ್ಲಿ ಶಾಸಕರು ಮನವಿ ಮಾಡಿದ್ದಾರೆ.
THG BIDAR