Bidar

ಉಪತಹಸಿಲ್ದಾರ  ಅಶೋಕ ರಾಜಾಗೀರ ವರ್ಗಾವಣೆಗೆ ಒತ್ತಾಯ: ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ

ಬೀದರ್ ತಾಲ್ಲೂಕಿನ ಜನವಾಡ ಹೊಬ್ಬಳಿಯ ಉಪತಹಸಿಲ್ದಾರ ಅಶೋಕ ರಾಜಗೀರ ಅವರು ಸರಕಾರ ನೀಡುವ ಸೌಲಭ್ಯಗಳನ್ನು ಅರ್ಹರಿಗೆ ನೀಡಲು ವಿಫಲರಾಗಿದ್ದು ಅವರನ್ನು ಕೂಡಲೆ ಜಿಲ್ಲೆಯಿಂದ ವರ್ಗಾವಣೆ ಮಾಡಬೇಕೆಂದು ಕರ್ನಾಟಕ ಪ್ರಜಾ ಶಕ್ತಿ,ಮಾನವ ಹಕ್ಕು ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿ ಅಧ್ಯಕ್ಷರು ಒತ್ತಾಯಿಸಿದರು.

ನಗರದಲ್ಲಿ ಸಾಯಿ ಶಿಂಧೆ,ಸಂಗಮೇಶ ಬಾವಿದೊಡ್ಡಿ   ಜಂಟಿಯಾಗಿ ಪ್ರತಿಭಟನೆ ನಡೆಸಿ ಮಾತನಾಡಿ ಇಂದಿರಾಗಾಂಧಿ ರಾಷ್ಟ್ರಿಯ ವ್ರದ್ದಪಾ ವೇತನ,ಸಂದ್ಯಾ ಸುರಕ್ಷ ವ್ರದ್ದಪಾ ವೇತನಕ್ಕಾಗಿ ಅರ್ಜಿ ಸಲ್ಲಿಸದವರನ್ನು ಇಲ್ಲದೊಂದು ಸಬೂಬು ಹೇಳಿ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ ಎಂದು ಆರೋಪಿಸಿದರು.

ಅರ್ಜಿದಾರರು ಬಿಪಿಎಲ್ ಪಡಿತರ ಚೀಟಿ ಹೊಂದಿವರಗೆ ಎಪಿಎಲ್ ಚೀಟಿ ಎಂದು ಕಾರಣ ಹೇಳಿ ವಿನಾರಣ ಜನರಿಗೆ ತೊಂದರೆ ಕೊಡುತಿದ್ದಾರೆ ಎಂದು ದೂರಿದರು.ಅವರ ಮಧ್ಯವರ್ತಿಗಳು ಕೇಳಿದಷ್ಟು ಹಣ ಕೊಟ್ಟರೆ ಮಾತ್ರ ಅರ್ಜಿ ಗಳನ್ನು ಸ್ವಿಕರಿಸುತಿದ್ದಾರೆ.ಯಾರು ಅರ್ಹ ತೆ ಹೊಂದಿರುತಾರೆ ಅವರು ಹಣ ನೀಡದಿದ್ದರೆ ಅರ್ಜಿ ಗಳನ್ನು ರದ್ದು ಪಡಿಸುತಿದ್ದಾರೆ ಎಂದು ಅರ್ಹತೆ ಇಲ್ಲದವರ ಕೆಲವರ ಅರ್ಜಿ ಸ್ವೀಕರಿಸಿದ ಹೆಸರನ್ನು ಸಹ ಬಹಿರಂಗ ಪಡಿಸಿದರು.

ಒಂದು ವೇಳೆ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಅರೆಬತ್ತಲೆ ಮೆರವಣೆಗೆ ನಡೆಸಲಾಗುತದೆ ಎಂದು ಎಚ್ಚರಿಸಿದರು.

THG ಬೀದರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button