Bidar

ನಗರದ ಜಗನ್ನಾಥ ಮಂದಿರದಲ್ಲಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ | ಭವ್ಯ ಮೆರವಣಿಗೆ

ಬೀದರ :ನಗರದ ಹೊರಹೊಲಯದಲ್ಲಿರುವ ಚಿಕ್ಕಪೇಟ ಹತ್ತಿರದ ಶ್ರೀ ಜಗನ್ನಾಥ ದೇವಾಲಯದಲ್ಲಿ ನಡೆಯುತ್ತಿರುವ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯು ಪ್ರಯಕ್ತ ನಗರದಲ್ಲಿ ರಥ ಯಾತ್ರೆ ನಡೆಯಿತ್ತು.ನಗರದ ಬ್ಯಾಂಕ್ ಕಾಲೋನಿಯಲ್ಲಿರುವ ಶ್ರೀ ಸತ್ಯನಾರಾಯಣ ಮಂದಿರದಿಂದ ಹೊರಟ ಭವ್ಯ ರಥ ಯಾತ್ರೆಗೆ ಕೇಂದ್ರ ಸಚಿವ ಭಗವಂತ ಖೂಬಾ ಅವರು ಚಾಲನೆ ನೀಡಿದರು.ರಥ ಯಾತ್ರೆಯಲ್ಲಿ ಭಾಗವಹಿಸಿದ ಬಿಜೆಪಿ ಮುಖಂಡ ಸೋಮಶೇಖರ್ ಪಾಟೀಲ್ ಸೇರಿದಂತೆ ಟ್ರಸ್ಟನ ಮುಖಂಡರು ಕೈಯಲಿ ಕಸಬರಿಕೆ ಹಿಡಿದುಕೊಂಡು ರಥ ಬರುತ್ತಿದಂತೆ ರಸ್ತೆ ಸ್ವಚ್ಛಗೊಳಿಸಿದರು.

ಬಿವಿಬಿ ಕಾಲೇಜ್ ಮಾರ್ಗ ವಾಗಿ ಮಹಾತ್ಮ ಬೊಮ್ಮಗೊಂಡೇಶ್ವರ,ಬಸವೇಶ್ವರ,ಅಂಬೇಡ್ಕರ ವೃತ್ತದಿಂದ ಮಂದಿರಕ್ಕೆ ತೆರಳಿ ಸಮಾರೋಪಗೊಂಡಿತ್ತು.ರಥ ಯಾತ್ರೆಯಲ್ಲಿ ಸಾವಿರಾರು ಭಕ್ತರು ,ಮಹಿಳೆಯರು ಭಾಗವಹಿಸಿ ದೇವರ ನಾಮಸ್ಮರಣೆಯೊಂದಿಗೆ ಹೆಜ್ಜೆ ಹಾಕಿ ಮೂರ್ತಿ ಪ್ರಾಣಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ಮೆರಗು ತಂದುಕೊಟ್ಟರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button