Bidar

ಆಗಸ್ಟ್.5 ರಂದು ಉದ್ಯೋಗ ಮೇಳ; ಕ್ಯಾಂಪಸ್ ಸಂದರ್ಶನ

ಬೀದರ ಅಗಸ್ಟ್ 03 (ಕರ್ನಾಟಕ ವಾರ್ತೆ): ಬೆಂಗಳೂರು ಸಮೀಪ ಇರುವ ಪ್ರತಿಷ್ಠಿತ ಕಂಪನಿಯಾದ ಹೊಂಡಾ ಕಂಪನಿಯಲ್ಲಿ ಕೆಲಸ ಮಾಡಲು ಯಾವುದೇ ವೃತ್ತಿಗಳಲ್ಲಿ ಐ.ಟಿ.ಐ. ಪಾಸಾದ ಅಭ್ಯರ್ಥಿಗಳು ಮತ್ತು ಪಿ.ಯು.ಸಿ. & ಪದವಿ ಪಾಸಾದ ಮಹಿಳಾ ಅಭ್ಯರ್ಥಿಗಳ ನೇಮಕಕ್ಕೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬಸವಕಲ್ಯಾಣದಲ್ಲಿ ಉದ್ಯೊಗ ಮೇಳ/ಕ್ಯಾಂಪಸ್ ಸಂದರ್ಶನ ಹಮ್ಮಿಕೊಳ್ಳಲಾಗಿದೆ.
ಪಿ.ಯು.ಸಿ. & ಪದವಿ ಪಾಸಾದ ಮಹಿಳಾ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಿ ಉದ್ಯೋಗ ನೀಡಲಿದ್ದಾರೆ. ಉದ್ಯೋಗ ಬೇಕಾಗಿರುವ ಆಸಕ್ತ ಐ.ಟಿ.ಐ. ಪಾಸಾದ ಮತ್ತು ಪಿ.ಯು.ಸಿ. & ಪದವಿ ಪಾಸಾದ ಮಹಿಳಾ ಅಭ್ಯರ್ಥಿಗಳು ತಮ್ಮ ಎಲ್ಲ ಮೂಲ ಪ್ರಮಾಣಪತ್ರಗಳೊಂದಿಗೆ ಸದರಿ ಸಂದರ್ಶನಕ್ಕೆ ಹಾಜರಾಗಿ ಇದರ ಸದುಪಯೋಗಪಡಿಸಿಕೊಳ್ಳಲು ತಿಳಿಸಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಕಂಪನಿ ನಿಯಮಗಳ ಪ್ರಕಾರ ಪಿ.ಎಫ್. ಮತ್ತು ಕ್ಯಾಂಟಿನ್ ಸೌಲಭ್ಯಗಳನ್ನು ನೀಡಿ 13000 ರೂ. ಕ್ರೂಢೀಕೃತ ವೇತನ ನೀಡಲಿದ್ದಾರೆ ಎಂದು ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸದಾವಕಾಶವನ್ನು ಬಳಸಿಕೊಂಡು ಸಂದರ್ಶನಕ್ಕೆ ಹಾಜರಾಗಿ ಉದ್ಯೋಗ ಪಡೆದುಕೊಳ್ಳಬೇಕೆಂದು ಸರ್ಕಾರಿ ಕೈ.ತ.ಸಂಸ್ಥೆ ಭಾಲ್ಕಿಯ ಪ್ರಾಚಾರ್ಯರಾದ ಲಕ್ಷಿ್ಮೀಕಾಂತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂದರ್ಶನ ದಿನಾಂಕ ಮತ್ತು ಸ್ಥಳ: ಆಗಸ್ಟ್.5 ರಂದು ಬೆಳಿಗ್ಗೆ 10 ಗಂಟೆಗೆ ಸರ್ಕಾರಿ ಐಟಿಐ ಕಾಲೇಜ ಬಂಗಲಾ ಅಗ್ನಿ ಶಾಮಕ ಠಾಣೆ ಹತ್ತಿರ, ಎನ್.ಎಚ್.ಲೈನ್ ಬಸವಕಲ್ಯಾಣ ಇಲ್ಲಿ ಸಂದರ್ಶನ ಆಯೋಜಿಸಲಾಗಿದೆ.
ಹೆಚ್ಚಿನ ವಿವರಗಳಿಗಾಗಿ: ಮೊ: 9480360909/9743315782 ಕ್ಕೆ ಸಂಪರ್ಕಿಸಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button