Bidar

ಬೀದರ ಜಿಲ್ಲೆಯಲ್ಲಿ ಹರಡಿದ್ದ ಖೋಟಾ ನೋಟುಗಳ ಜಾಲ ಬೇಧಿಸಿದ ಪೊಲೀಸರು

ಬೀದರ ಆಗಸ್ಟ್ 2 (ಕರ್ನಾಟಕ ವಾರ್ತೆ): ಬೀದರ ಜಿಲ್ಲೆಯಲ್ಲಿ ಹರಡಿದ್ದ ಖೋಟಾ ನೋಟುಗಳ ಜಾಲವನ್ನು ಬೇಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ ಡಿ.ಎಲ್. ಅವರು ತಿಳಿಸಿದರು.
ಆಗಸ್ಟ್ 2ರಂದು ಗಾಂಧಿಗAಜ್ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ ಅವರು, ವ್ಯಕ್ತಿಯೊಬ್ಬರು ಕಳೆದ ಜುಲೈನಲ್ಲಿ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದಂತೆ ಮತ್ತು ಎರಡು 500 ರೂ ಖೋಟಾ ನೋಟುಗಳನ್ನು ಹಾಜರುಪಡಿಸಿದ ಮೇರೆಗೆ ಗಾಂಧಿಗAಜ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 105/2021 ಕಲಂ 489(ಎ), 489(ಬಿ), 489(ಸಿ), 420 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಮೈಲೂರಿನ ಸಿಎಂಸಿ ಕಾಲೋನಿ ಒಬ್ಬರು, ಬೋರಗಿ (ಜೆ) ಗ್ರಾಮದ ಒಬ್ಬರು, ಬೀರಿ (ಕೆ) ಗ್ರಾಮದ ಒಬ್ಬರು, ಅಳವಾಯಿ (ಸದ್ಯ ಭಾಲ್ಕಿ) ಗ್ರಾಮದ ಒಬ್ಬರು, ಲಾಡಗೇರಿ ಗ್ರಾಮದ ಒಬ್ಬರು ಮತ್ತು ಕುಂಬಾವಾಡದ ಚಿಯೋನ್ ಕಾಲೋನಿಯ ಒಬ್ಬರು ಸೇರಿ ಒಟ್ಟು ಆರು ಜನರನ್ನು ದಸ್ತಗೀರ್ ಮಾಡಿ ಅವರಿಂದ 500 ರೂ ಮುಖ ಬೆಲೆಯ ಒಟ್ಟು 274 ನಕಲಿ (ಖೋಟಾ) ನೋಟುಗಳನ್ನು ಮತ್ತು ನೋಟುಗಳನ್ನು ತಯಾರಿಸಲು ಉಪಯೋಗಿಸಿದ ಲ್ಯಾಪಟಾಪ್, ಪ್ರಿಂಟರ್ ಹಾಗೂ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸದರಿ ಪ್ರಕರಣವು ಇನ್ನೂ ತನಿಖೆಯಲ್ಲಿದೆ. ಇನ್ನು ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಬೀದರ ಜಿಲ್ಲೆಯಲ್ಲಿ ಹರಡಿದ್ದ ಖೋಟಾ ನೋಟುಗಳ ಜಾಲವನ್ನು ಬೇಧಿಸಿ ಪ್ರಕರಣವನ್ನು ಬೆಳಕಿಗೆ ತಂದ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯ ಶ್ಲಾಘನೀಯವಾಗಿದೆ. ವಿಶೇಷವಾಗಿ ಕರ್ತವ್ಯ ನಿರ್ವಹಿಸಿ ಪ್ರಕರಣವನ್ನು ಬೇಧಿಸಿದ ಪೊಲೀಸ್ ತಂಡಕ್ಕೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಎಸ್ಪಿ ನಾಗೇಶ ಡಿ.ಎಲ್. ಅವರು ತಿಳಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button