ಫೆ.29 ರೊಳಗೆ ಹೆಸರು ಪ್ರದರ್ಶಿಸುವ ಫಲಕಗಳ ಮೇಲೆ ಅರ್ಧಭಾಗ ಕನ್ನಡ ಅಳವಡಿಸಲು ಸೂಚನೆ

ಬೀದರ್ : ನಗರ ಸಭೆಯ ವ್ಯಾಪ್ತಿಯಲ್ಲಿನ ವಾಣಿಜ್ಯ, ಕೈಗಾರಿಕೆ ಮತ್ತು ವ್ಯಾಪಾರ ಸಂಸ್ಥೆ, ನ್ಯಾಸಗಳು, ಸಮಲೋಚನ ಕೇಂದ್ರಗಳು, ಆಸ್ಪತ್ರೆಗಳು, ಮನೋರಂಜಾ ಕೇಂದ್ರಗಳು, ಹೋಟೆಲ್‌ಗಳು, ಬಾರ್ ಮತ್ತು ರೆಸ್ಟೋರೆಂಟ್, ಪೆಟ್ರೋಲ್ ಬಂಕ್‌ಗಳು ಹಾಗೂ ಮುಂತಾದವುಗಳ ಹೆಸರನ್ನು ಪ್ರದರ್ಶಿಸುವ ಫಲಕಗಳ ಮೇಲಿನ ಅರ್ಧ ಭಾಗವು ಕನ್ನಡದಲ್ಲಿ ಇರತಕ್ಕದ್ದು ಮತ್ತು ಕೆಳಗಿನ ಅರ್ಧಭಾಗವು ಬೇರೆ ಯಾವುದೇ ಭಾಷೆಯಲ್ಲಿ ಫೆಬ್ರವರಿ 29 ರೊಳಗೆ ಬರೆದು ಹಚ್ಚಲು ಈ ಮೇಲಿನ ಉದ್ದಿಮೆ ನಡೆಸುತ್ತಿರುವ ಮಾಲೀಕರಿಗೆ ಕಟ್ಟುನಿಟ್ಟಾಗಿ ಸೂಚಿಸಿದೆ.

ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕರ್ನಾಟಕ ರಾಜ್ಯ ಭಾಷಾ ಅಧಿನಿಯಮ 1981(6) ಪ್ರಕಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಬೀದರ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

THG BIDAR

Latest Indian news

Popular Stories