ವ್ಯಕ್ತಿ ಕಾಣೆ: ಪತ್ತೆಗಾಗಿ ಮನವಿ

ಬೀದರ್ : ಜಿಲ್ಲೆಯ ಹುಮನಾಬಾದ ಪಟ್ಟಣದ ಹಳೆ ಆರ್.ಟಿ.ಓ. ಕಚೇರಿ ಹತ್ತಿರ ಸೊನಾಲಿಕಾ ಟ್ರಾಕ್ಟರ ಶೋ ರೂಮನಲ್ಲಿ ವಾಚಮ್ಯಾನ ಕೆಲಸ ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದ ಸಂಜುರೆಡ್ಡಿ ಲಚ್ಚರೆಡ್ಡಿ (53) ,ದಿನಾಂಕ: 24-01-2024 ರಂದು ತಂಬಾಕು ತೆಗೆದುಕೊಂಡು ಬರುತ್ತೇನೆಂದು ಹೋಗಿ ಕಾಣೆಯಾಗಿರುತ್ತಾರೆ.

ಕಾಣೆಯಾದ ವ್ಯಕ್ತಿಯು 5 ಅಡಿ 6 ಇಂಚ ಎತ್ತರ ಇದ್ದು, ಸಾಧಾರಣ ಮೈಕಟ್ಟು ಗೋಧಿ ಬಣ್ಣ, ಬೋಳು ತಲೆ ಇದ್ದು, ಮೈಮೇಲೆ ಬಿಳಿ ಶರ್ಟ ಕರಿ ಪ್ಯಾಂಟ ಧರಿಸಿರುವ ಇವರು ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ ಬೀದರ ದೂರವಾಣಿ ಸಂಖ್ಯೆ: 08482-226704/100, ಪೊಲೀಸ್ ಉಪಾಧೀಕ್ಷಕರು ಹುಮನಾಬಾದ ದೂರವಾಣಿ ಸಂಖ್ಯೆ: 08483-270028, ಪೊಲೀಸ್ ವೃತ್ತ ನಿರೀಕ್ಷಕರು ಹುಮನಾಬಾದ ವೃತ್ತ ದೂರವಾಣಿ ಸಂಖ್ಯೆ: 08483-270159 ಮೊಬೈಲ್ ಸಂಖ್ಯೆ: 9480803435, ಪೊಲೀಸ್ ಉಪ ನಿರೀಕ್ಷಕರು ಹುಮನಾಬಾದ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08483-270033, ಮೊಬೈಲ್ ಸಂಖ್ಯೆ: 9480803452 ಗೆ ಸಂಪರ್ಕಿಸುವಂತೆ ಹುಮನಾಬಾದ ಪೊಲೀಸ್ ಠಾಣೆಯ ಅಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.

THG BIDAR

Latest Indian news

Popular Stories