Bidar

ಕಸಾಪ ಚುನಾವಣೆ, ಡಾ. ಹೆಬ್ಬಾಳೆಗೆ ಬೆಂಬಲ

ಬೀದರ: ಜಿಲ್ಲಾ ಕಸಾಪ ಅಭ್ಯರ್ಥಿ ಡಾ. ರಾಜಕುಮಾರ ಹೆಬ್ಬಾಳೆ ಅವರು ನಗರದ ವಿದ್ಯಾನಗರ ಬಡಾವಣೆಯಲ್ಲಿ ಪ್ರಚಾರ ನಡೆಸಿದರು. ವಿದ್ಯಾನಗರ ಬಡಾವಣೆಯ ಬಸವಕೇಂದ್ರದ ಮುಖಂಡರಾದ ಪ್ರಭುರಾವ ವಸ್ಮತೆಯವರು ಡಾ. ರಾಜಕುಮಾರ ಹೆಬ್ಬಾಳೆಯವರ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿ, `ಡಾ. ರಾಜಕುಮಾರ ಅವರು ಕ್ರಿಯಾಶೀಲ ಮತ್ತು ಚೈತನ್ಯಶೀಲ ಕಠಿಣ ಪರಿಶ್ರಮಿಯಾಗಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ನಡೆದು ಬೀದರ ಜಿಲ್ಲೆಗೆ ಕೇಂದ್ರ ಹಾಗೂ ರಾಜ್ಯದ ಯೋಜನೆಗಳನ್ನು ತರುವ ಪಾಂಡಿತ್ಯಪೂರ್ಣ ವ್ಯಕ್ತಿಯಾಗಿದ್ದಾರೆ. ಇಂತಹ ಉತ್ಸಾಹಿ ಯುವಕರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದರೆ ಜಿಲ್ಲೆಯಲ್ಲಿ ಹೊಸ ಮನ್ವಂತರ ಆರಂಭ ಮಾಡಬಹುದು ಎಂದರು. ರಾಜಕುಮಾರ ಅವರಿಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಅಭ್ಯರ್ಥಿ ಡಾ. ರಾಜಕುಮಾರ ಹೆಬ್ಬಾಳೆ, ಕೇಂದ್ರ ಜಾಗೃತಿ ಸಮಿತಿ ಸದಸ್ಯರಾದ ಶಿವಯ್ಯ ಸ್ವಾಮಿ, ಎಸ್.ಬಿ.ಕುಚಬಾಳ, ಶ್ರೀಕಾಂತ ಪಾಟೀಲ, ಪ್ರಕಾಶ ಕನ್ನಾಳೆ, ಡಾ. ಸುನಿತಾ ಕೂಡ್ಲಿಕರ್, ಡಾ. ಮಹಾನಂದ ಮಡಕಿ, ಸವಿತಾ ಸಾಕೋಳೆ, ಡಾ. ಸಾವಿತ್ರಿಬಾಯಿ ಹೆಬ್ಬಾಳೆ, ಅಶೋಕ ಹೆಬ್ಬಾಳೆ, ಮಹಾನಂದ ಆರ್. ಹೆಬ್ಬಾಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button