
ಗ್ರಂಥಾಲಯ ಹಳೆ ದಿನಪತ್ರಿಕೆ, ನಿಯತಕಾಲಿಕೆಗಳ ವಿಲೇವಾರಿ: ಆಸ್ತಕರು ಜನವರಿ 31 ರೊಳಗೆ ದರಪಟ್ಟಿ ಸಲ್ಲಿಸಲು ಅವಕಾಶ
ಬೀದರ : ಜಿಲ್ಲಾ ಕೇಂದ್ರ ಗ್ರಂಥಾಲಯ, ಬೀದರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಖಾ ಗ್ರಂಥಾಲಯಗಳಲ್ಲಿ ಸಂಗ್ರಹವಾದ ಹಳೆಯ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳನ್ನು ದಿನಾಂಕ:01-04-2020 ರಿಂದ 31-03-2023 ರವರೆಗೆ ವಿಲೇವಾರಿ ಮಾಡಬೇಕಾಗಿದ್ದು, ಹಳೆಯ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳನ್ನು ಖರೀದಿಸಲು ಇಚ್ಛೆಯುಳ್ಳವರು ತಮ್ಮ ದರಗಳನ್ನು ಸೀಲು ಮಾಡಿದ ಕವರುಗಳಲ್ಲಿ ಮುಖ್ಯ ಗ್ರಂಥಾಲಯಾಧಿಕಾರಿಗಳ ಕಛೇರಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ಬೀದರ ಇವರ ಹೆಸರಿಗೆ ದಿನಾಂಕ: 31-01-2024 ರಂದು ಸಾಯಂಕಾಲ 4 ಗಂಟೆಯ ಒಳಗಾಗಿ ತಲುಪುವಂತೆ ಖುದ್ದಾಗಿ ಇಲ್ಲವೇ ಅಂಚೆಯ ಮೂಲಕ ಸಲ್ಲಿಸಬಹುದು. ಅದೇ ದಿನ ಅಂದರೆ ದಿನಾಂಕ:31-01-2024 ರಂದು ಸಾಯಂಕಾಲ 5 ಗಂಟೆಗೆ ಹಾಜರಿದ್ದವರ ಸಮಕ್ಷಮ ದರಗಳನ್ನು ತೆರೆಯಲಾಗುವದು.
ಹೆಚ್ಚಿನ ಮಾಹಿತಿಗಾಗಿ ಮುಖ್ಯ ಗ್ರಂಥಾಲಯಾಧಿಕಾರಿಗಳು ಜಿಲ್ಲಾ ಕೇಂದ್ರ ಗ್ರಂಥಾಲಯ ಚಿತ್ತಖಾನ ಕಟ್ಟಡ ಸರಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು,ಪ್ರೌಢ ಶಾಲೆ ವಿಭಾಗ ಬೀದರ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಬೀದರ ಜಿಲ್ಲಾ ಕೆಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
THG Bidar




