ನಿಗಮ‌ ಮಂಡಳಿ ನೇಮಕಾತಿಯಲ್ಲಿ ಮಾದಿಗ ಸಮಾಜಕ್ಕೆ ಅನ್ಯಾಯ : ಸ್ವಾಭಿಮಾನ ಇದ್ದರೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ — ಫರ್ನಾಂಡೀಸ್ ಹಿಪ್ಪಳಗಾಂವ

ರಾಜ್ಯ ಕಾಂಗ್ರೆಸ್ ಸರಕಾರದಿಂದ ನಿಗಮ ಮಂಡಳಿಗಳ ಅಧ್ಯಕ್ಷ ನೇಮಕದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಮಾದಿಗ ಸಮಾಜಕ್ಕೆ ಮಾಡಿರುವ ಅನ್ಯಾಯಕ್ಕೆ ತೀವ್ರವಾಗಿ ಖಂಡಿಸುವದಾಗಿ ಮಾದಿಗ ದಂಡೊರ ಮಾದಿಗ ಮೀಸಲಾತಿ ಹೊರಾಟ ಸಮಿತಿ ರಾಜ್ಯಾ ಕಾರ್ಯದ್ಯಕ್ಷ ಫರ್ನಾಂಡೀಸ್ ಹಿಪ್ಪಳಗಾಂವ ತಿಳಿಸಿದರು.
ಅವರು ಇಲ್ಲಿಯ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಸಮಾಜದ ರಾಜ್ಯ ನಾಯಕರಿಗಾಗಲಿ,ಜಿಲ್ಲೆಯ ನಾಯಕರಿಗೆ ನಿಗಮ ಮಂಡಳಿಯಲ್ಲಿ ಯಾವುದೆ ಸ್ಥಾನ ಕೊಡದೆ ಸಂಪೂರ್ಣ ವಾಗಿ ಕಡೆಗಣಿಸಿದೆ ಎಂದರು.

ಮಾದಿಗ ಸಮಾಜದ ಜನರಲ್ಲಿ ಸ್ವಾಭಿಮಾನ ಇದ್ದರೆ ಬರುವಂತ ಲೊಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಿ ನಮ್ಮ ಶಕ್ತಿಯನ್ನು ತೋರಿಸಿಕೊಡಬೇಕೆಂದು ಮನವಿ ಮಾಡಿದರು.

ಮೊದಲಿನಿಂದಲೂ ಸಹ ಮಾದಿಗ ಸಮಾಜಕ್ಕೆ ಸರಕಾರದಲ್ಲಾಗಲಿ,ಪಕ್ಷದಲ್ಲಿ ಆಗಲಿ ಸ್ಥಾನ ನೀಡದೇ ಕಡೆಗಣಿಸುತ್ತಾ ಬಂದಿದ್ದೆ ಎಂದು ಆರೊಪಿಸಿದರು.
ಬೀದರ್ ಜಿಲ್ಲೆಯಲ್ಲಿ ಮಾದಿಗ ಸಮಾಜ ಹೊರತು ಪಡಿಸಿ ಇನ್ನುಳಿದ ಎಲ್ಲ ಜಾತಿಗಳಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕಲ್ಪಿಸಿದ್ದಾರೆ ಆದರೆ ನಮ್ಮನು ಮಾತ್ರ ಕೈಬಿಟ್ಟಿದಾರೆ ಎಂದರು.
ಈ ಹಿಂದೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಿಂದ ಸ್ಪರ್ಧಿಸಲು ಒಂದು ಸ್ಥಾನವನ್ನು ನೀಡದೆ ಅನ್ಯಾಯ ಮಾಡಿರುತ್ತಾರೆ ಆದರು ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಸಮಾಜದ ಮತಗಳು ಹಾಕಿ ರಾಜ್ಯದಲಿ ಕಾಂಗ್ರೆಸ್ ಪಕ್ಷ ಅಧಿಕಾರ ಬಂದಿದೆ ಎಂದು ನುಡಿದರು.

ಸುಮಾರು 75 ವರುಷಗಳಿಂದ ಕಣ್ಮುಚಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಸಮುದಾಯ ಅದು ಮಾದಿಗ ಎಂದ ಅವರು ಸಮಾಜದಿಂದ ಇದ್ದ ಒಬ್ಬ ವಿಧಾನ ಪರಿಷತ್ ಸದಸ್ಯರನ್ನು ಕೂಡ ಕೈಬಿಟ್ಟು ಭಾರಿ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.ಚುನಾವಣೆಯಲ್ಲಿ ಆದ ತಪ್ಪನ್ನು ಸುಧಾರಿಸಿಕೊಂಡು ಬರುವ ದಿನಗಳಲ್ಲಿ ಒಳ್ಳೆಯ ಸ್ಥಾನ ಮಾನ ಕೊಡಿಸುವದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿ ಮೋಸಮಾಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಕೇವಲ ಚುನಾವಣೆಯಲ್ಲಿ ಮಾದಿಗ ಸಮಾಜದವರನ್ನು ವೋಟ್ ಬ್ಯಾಂಕ್ ಮಾಡಿಕೊಂಡು ಅಧಿಕಾರದ ಚುಕ್ಕಾಣೆ ಹಿಡಿದು ಸರಕಾರದಲ್ಕಿ ಯಾವುದೆ ಸ್ಥಾನಮಾನ ನೀಡದೆ ರಾಜಕಿಯದಿಂದ ಮುಗಿಸುವ ಹುನ್ನಾರು ಕಾಂಗ್ರೆಸ್ ಪಕ್ಷದಿಂದ ನಡೆದಿದೆ ಎಂದು ದೂರಿದರು.
ಇತ್ತಿಚಿಗೆ ನಗರದಲ್ಲಿ ನಡೆದ ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಅಭಿನಂದನಾ ಸಮಾರಂಭದಲ್ಲಿ ಸಮಾಜದ ಜಿಲ್ಲೆಯ ನಾಯಕರಿಗೆ ಯಾವುದೇ ಸ್ಥಾನ ಮಾಡ ನೀಡಿರುವುದಿಲ್ಲ,ಹಾಕಿರುವ ಫ್ಲಾಕ್ಸಗಳಲ್ಲಿಯೂ ಭಾವಚಿತ್ರಗಳು ಹಾಕದೆ ಅವಮಾನ ಮಾಡಿರುತ್ತಾರೆ ಎಂದರು.
ಕಾಂಗ್ರೆಸ್ ಪಕ್ಷದ ಯುವನಾಯಕ ಸಾಗರ ಖಂಡ್ತೆಯವರು ಎಲ್ಲ ಕ್ಷೇತ್ರದ ಹಳ್ಳಿಗಳಲ್ಲಿ ಹಾಕಿರುವ ಫ್ಲಾಕ್ಸನಲ್ಲಿಯು ಸಹ ಮಾದಿಗ ಸಮಾಜದ ನಾಯಕರ ಭಾವಚಿತ್ರ ಹಾಕದೆ ಅವಮಾನಿಸಿರುವುದು ಖಂಡನೀಯ ಎಂದರು.

ಅಖಿಲ ಭಾರತ ಕಾಂಗ್ರೆಸ ಸಮಿತಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾದ ಬಳಿಕ ಮಾದಿಗ ಸಮಾಜಕ್ಕೆ ತುಳಿಯುವಂತ ಕೆಲಸ ಪಕ್ಷದಲ್ಕಿ ನಡೆಯುತಿದೆ ಎಂದು ಆರೋಪಿಸಿದರು.

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಯ ಕಾರ್ಯಕರತರನ್ನು ಗುರುತಿಸಿ ನಿಗಮ‌ ಮಂಡಳಿ ಅದ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಒತ್ತಾಯಿಸಿದ ಅವರು ಒಂದು ವೇಳೆ ಮಾಡದಿದ್ದರೆ ಬರುವಂತ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವದಾಗಿ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಕಮಾಲಕರ ಎಲ್.ಹೆಗಡೆ,ರವಿ ಸೂರ್ಯವಂಶಿ ಸೇರಿದಂತೆ ಮತಿತ್ತರರು ಇದ್ದರು.

Latest Indian news

Popular Stories