Bidar

ಬೀದರ್ ಬ್ರೇಕಿಂಗ್ | ಓಡುತ್ತಾ ನಾಮಪತ್ರ ಸಲ್ಲಿಸಲು ತೆರಳಿದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ

ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಓಡುತ್ತಾ ನಾಮಪತ್ರ ಸಲ್ಲಿಸಿದ್ದಾರೆ. 3 ಗಂಟೆಯೊಳಗಾಗಿ ನಾಮಪತ್ರ ಸಲ್ಲಿಸಲು ಅವಕಾಶ ಹಿನ್ನೆಲೆ ಓಡುತ್ತ ಹೋಗಿ ನಾಮಪತ್ರ ಸಲ್ಲಿಸಿದ ಪ್ರಸಂಗ ನಡೆಯಿತು.

ಖೂಬಾ ಓಡುತ್ತಿದ್ದಂತೆ ಬಸವಕಲ್ಯಾಣ ಶಾಸಕ ಶರಣು ಸಲಗರ್, ಸಿದ್ದು ಪಾಟೀಲ್, ಅವಿನಾಶ ಜಾಧವ್ ಅವರ ಹಿಂದೆ ಓಡಿದರು. ಮುಂದೆ ಹೋಗುತ್ತಲೇ ಶಾಸಕರನ್ನ ಕೈ ಮಾಡಿ ಖುಬಾ ಕರೆಸಿ ಜೊತೆ ಸೇರಿಸಿಕೊಂಡರು.

ಮುಖ್ಯಾಂಶಗಳು:

ಬೀದರ್ ನಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ನಾಮಪತ್ರ ಸಲ್ಲಿಕೆ

ಚುನಾವಣಾಧಿಕಾರಿಗೆ ತಮ್ಮ ಅಫಿಡವಿಟ್ ಸಲ್ಲಿದ ಖೂಬಾ

ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ 3 ಕೋಟಿ ರೂಪಾಯಿ ಒಡೆಯ

57 ವರ್ಷದ ಭಗವಂತ ಖೂಬಾ BE ಪದವಿಧರಾಗಿದ್ದಾರೆ

ಪತ್ನಿ ಶೀಲಾ 1.48 ಕೋಟಿ ರುಪಾಯಿಯ ಒಡತಿ

2,33,75,000 ರೂಪಾಯಿ ಸ್ಥಿರಾಸ್ತಿ,71,54,214 ಚರಾಸ್ತಿ

ಖೂಬಾ ಬಳಿ 8 ಲಕ್ಷ ,ಪತ್ನಿ ಶೀಲಾ ಬಳಿ 5 ಲಕ್ಷ ನಗದು

ಖೂಬಾ ಬಳಿ 3.60 ಲಕ್ಷ ಮೌಲ್ಯದ ಎರಡೂ ಕೈ ಗಡಿಯಾರ

ಭಗವಂತ ಖೂಬಾಗೆ 9.09 ಲಕ್ಷ ರೂಪಾಯಿ ಸಾಲ ಘೋಷಣೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button