ಶಾಹೀನ್ ಕಾಲೇಜಿನಲ್ಲಿ ನೀಟ್ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಹಾಗೂ ಅಭಿನಂದನಾ ಸಮಾರಂಭ

ಬೀದರ್: ನೀಟ್ ಪರಿಕ್ಷೆಯಲ್ಲಿ 350 ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೊತ್ಸಾಹಿಸುವ ನಿಟ್ಟಿನಲ್ಲಿ ಇದೆ ದಿನಾಂಕ 2ರ ರವಿವಾರ ಬೆಳಿಗ್ಗೆ 11.30 ಗಂಟೆಗೆ ಬೀದರ್‌ನ ಶಾಹೀನ್ ನಗರದಲ್ಲಿರುವ ಶಾಹೀನ್ ಕಾಲೇಜಿನಲ್ಲಿ ಸಂದರ್ಶನ ಹಾಗೂ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಸುರೇಶ ಚನಶೆಟ್ಟಿ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಲ್ಯಾಣ ಕರ್ನಾಟಕದ ಅಮೃತ ಮಹೋತ್ಸವ ಪ್ರಯುಕ್ತ ಪ್ರತಿಷ್ಟಿತ ಬೆಂಗಳೂರಿನ ನಾರಾಯಣ ಹೃದಾಲಯದ ಪ್ರಾಯೋಜಕತ್ವದಲ್ಲಿ ಬೀದರ್‌ನ ಶಾಹೀನ್ ಶಿಕ್ಷಣ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಕಲ್ಯಾಣ ಕರ್ನಾಟಕದ ಗ್ರಾಮಿಣ ಭಾಗದ ಪ್ರತಿಭಾನ್ವಿತ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅತ್ತುತ್ಯಮ ಶಿಕ್ಷಣ ಒದಗಿಸಿ ವೈದ್ಯರನ್ನಾಗಿಸುವ ಸದುದ್ದೇಶದಿಂದ ಈ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.

ವೈದ್ಯಕೀಯ ಕ್ಷೇತ್ರದಲ್ಲಿ ಆಸಕ್ತಿ ಇರುವ ಮತ್ತು 2024 ರ ಪೂರ್ವಭಾವಿಯಾಗಿ ನೀಟ್ ಪರೀಕ್ಷೆ (ನೀಟ್ ರಿಪಿಟರ್ಸ್ ) ಮತ್ತೊಮ್ಮೆ ಬರೆಯಲು ಇಚ್ಛಿಸುವ ಆಸಕ್ತ 75 ಬಡ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಪ್ರವೇಶ ನೀಡಲು ನಿರ್ಧರಿಸಲಾಗಿದೆ ಎಂದರು.

ಈಗಾಗಲೆ ಪ್ರತಿವರ್ಷ ನೂರಾರು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಸೇರುವಂತೆ ಅತ್ಯುತ್ತಮ ಶಿಕ್ಷಣ ನೀಡುತ್ತಿರುವ ಬೀದರ್‌ನ ಖ್ಯಾತ ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ ಅಬ್ದುಲ್ ಖದೀರ ಅವರು ಮತ್ತು ನಾರಾಯಣ ಹೃದಯಾಲಯ ಬೆಂಗಳೂರು ಇದಕ್ಕೆ ಒಪ್ಪಿಗೆ ನೀಡಿದ್ದು ಆಸಕ್ತ ವಿದ್ಯಾರ್ಥಿಗಳು ಇದೆ ಜೂನ 28 ರ ಒಳಗಾಗಿ ತಮ್ಮ ಇತ್ತೀಚಿನ 3 ಭಾವಚಿತ್ರಗಳೊಂದಿಗೆ ಜಾತಿ-ಆದಾಯ ಪ್ರಮಾಣ ಪತ್ರ, ಹತ್ತನೆ ತರಗತಿಯ ಹಾಗೂ ನೀಟ್ ದೃಢೀಕೃತ ಅಂಕ ಪಟ್ಟಿಗಳೊಂದಿಗೆ ತಮ್ಮ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸುರೇಶ ಚನಶೆಟ್ಟಿ ಅಧ್ಯಕ್ಷರು ಜಿಲ್ಲಾ ಕಸಾಪ ಬೀದರ ಹಾಗೂ ಶಿವಶಂಕರ ಟೋಕರೆ ಸಂಯೋಜಕರು ಇವರಿಗೆ ಅಥವಾ ದೂರವಾಣಿ ಸಂಖ್ಯೆ 9986792323, 934 1652131ಗೆ ಅಥವಾ ಶಾಹೀನ್ ಕಚೇರಿ: 180012116235ಗೆ ಸಂಪರ್ಕಿಸಬಹುದಾಗಿದೆ.

ಇನ್ನು ಕಲ್ಯಾಣ ಕರ್ನಾಟಕದ ಬೇರೆ ಬೇರೆ ಜಿಲ್ಲೆಯಿಂದ ಭಾಗವಹಿಸುವ ವಿದ್ಯಾರ್ಥಿಗಳ ಜೊತೆ ಒಬ್ಬ ಅವರ ಪೋಷಕರಿಗೂ ಊಟ, ವಸತಿ ಪ್ರಯಾಣ ಭತ್ಯೆ ಜೊತೆಗೆ ಬೀದರ ನಗರದ ಐತಿಹಾಸಿಕ ಸ್ಥಳಗಳ ವೀಕ್ಷಣೆಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.

Latest Indian news

Popular Stories