Bidar

ಯಾದಗಿರಿ | ಸ್ಕೈ ಬಲೂನ್ ಬಿಡುಗಡೆ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ಯಾದಗಿರಿ ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ‌ ಇಲಾಖೆ ಸಹಾಯದೊಂದಿಗೆ ಕಲ್ಯಾಣ ಕರ್ನಾಟಕ ವಿಭಾಗದ ದ್ವಿತೀಯ ಜಾಂಬೋರೇಟ್‌ ಕಾರ್ಯಕ್ರಮದ ಪ್ರಯುಕ್ತ ಇಂದು ದಿನಾಂಕ 10-01-2025 ಬೆಳಿಗ್ಗೆ 11:30ಕ್ಕೆ ಸನ್ಮಾನ್ಯ ಶ್ರೀ ಸುರೇಶ್ ಆರ್ .ಸಜ್ಜನ್ ಇವರ ಅಧ್ಯಕ್ಷತೆಯಲ್ಲಿ ಸ್ಕೈ ಬಲೂನ್ ಬಿಡುಗಡೆ ಮಾಡಲಾಯಿತು.

ಸಮಾರಂಭವನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು ಉದ್ಘಾಟಕರಾಗಿ ಸನ್ಮಾನ್ಯ ಶ್ರೀ ಶರಣಬಸಪ್ಪ ಕೋಟೆಪ್ಪ ಗೋಳ ಅಪರ ಜಿಲ್ಲಾಧಿಕಾರಿಗಳು ಅಪರ ಜಿಲ್ಲಾ ದಂಡಾಧಿಕಾರಿಗಳು ಯಾದಗಿರಿ ಇವರು ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿದರು ಈ ಸಂದರ್ಭದಲ್ಲಿ ಶ್ರೀ ರಾಜ ಮುಕುಂದ ನಾಯಕ್ ಉಪಾಧ್ಯಕ್ಷರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಯಾದಗಿರಿ ಇವರು ಕೈ ಬೆಲೂನ್ ನೆನಪಿನ ಕಾಣಿಕೆಯಾಗಿ ನೀಡಿ ಈ ಒಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿಗಳು ‌‌ ಶ್ರೀ ರಾಘವೇಂದ್ರ ಹಳ್ಳಳ್ಳಿ , ಶ್ರೀಮತಿ ಮಲ್ಲೇಶ್ವರಿ ಜುಜಾರೆ ASOC/ರೇಂಜರಿಂಗ್ ವಿಭಾಗ/ಕಲ್ಯಾಣ ಕರ್ನಾಟಕ ಉಸ್ತುವಾರಿ, ಶ್ರೀ ಸಿದ್ದು ಪಾಟೀಲ್ ಜಾಂಬೋರೇಟ್ ಖಜಾಂಚಿಗಳು ಹಾಗೂ ಜಿಲ್ಲಾ ಸಂಸ್ಥೆ ಪದಾಧಿಕಾರಿಗಳು, ಸ್ಕೌಟ್ಸ್ ಮಾಸ್ಟರ್ ರವರು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button