ಭಾಲ್ಕಿ ಗ್ರಾಮೀಣ ವೃತ್ತ ಪೊಲೀಸ್‌ರ ಯಶಸ್ವಿ ಕಾರ್ಯಾಚರಣೆ ಲಾರಿ ದರೋಡೆ ಮಾಡಿದ ಆರೋಪಿಗಳ ಬಂಧನ

ಬೀದರ ಜೂನ್ 19 (ಕ.ವಾ.): ಲಾರಿ ದರೋಡೆ ಮಾಡಿದ ಆರೋಪಿಯನ್ನು ಬಂಧಿಸಿ 17 ಲಕ್ಷ ರೂಪಾಯಿಯ ತೊಗರೆ ಬೆಳೆ ಮತ್ತು ಕೃತ್ಯದಲ್ಲಿ ಬಳಸಿದ 02 ಮೋಟಾರ್ ಸೈಕಲ್ ಜಪ್ತಿ ಮಾಡಿ ಭಾಲ್ಕಿ ಗ್ರಾಮೀಣ ವೃತ್ತ ಪೊಲೀಸ್‌ರ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ ಡಿ.ಎಲ್.ಅವರು ತಿಳಿಸಿದ್ದಾರೆ.
ಈ ದರೋಡೆ ಪ್ರಕರಣದಲ್ಲಿ ಆರೋಪಿತರಿಗೆ ಬಂಧಿಸಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯ ಶ್ಲಾಘನಿಯವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಏನಿದು ಪ್ರಕರಣ: ಮೇ.4ರ Áತ್ರಿ 9:30 ಗಂಟೆಗೆ ಲಾರಿ ನಂಎಪಿ-26/ಟಿ.ಡಿ-4284 ನೇದರಲ್ಲಿ ಮಹಾರಾಷ್ಟ್ ರಾಜ್ಯದ ಉದಗೀರದಿಂದ 225 ಕ್ಚಿಂಟಾಲ್ ತೊಗರೆ ಬೆಳೆ 30 ಕ್ವಿಂಟಾಲ್ ಕಡಲೆ ಬೆಳೆ ಲೋಡ್‌ಮಾಡಿಕೊಂಡು ಆಂದ್ರಪ್ರದೇಶದ ನೆಲ್ಲೂರ ನಗರಕ್ಕೆ ತೆಗೆದುಕೊಂಡು ಹೋಗುವಾಗ ಬೀದರ-ಉದಗೀರ ರಸ್ತೆ ಭಾಲ್ಕಿ ತಾಲೂಕಿನ ವಳಸಂಗ ಕ್ರಾಸ್ ಹತ್ತಿರ ಎರಡು ಮೋಟಾರ ಸೈಕಲಗಳ ಮೇಲೆ 06 ಜನ ದರೋಡೆಕೊರರು ಬಂದು ಲಾರಿಯನ್ನು ನಿಲ್ಲಿಸಿ ಲಾರಿ ಮತ್ತು ಲಾರಿಯಲ್ಲಿದ್ದ225 ಕ್ಚಿಂಟಾಲ್ ತೊಗರೆ ಬೆಳೆ 30 ಕ್ವಿಂಟಾಲ್ ಕಡಲೆ ಬೆಳೆ ಹೀಗೆ ಒಟ್ಟು 37,91,290 ಮೌಲ್ಯದ ಸ್ವತ್ತನ್ನು ದರೋಡೆ ಮಾಡಿಕೊಂಡು ಹೋಗಿದ್ದಾರೆ ಎಂದು ಲಾರಿ ಚಾಲಕ ಶ್ರೀ ಟಿ. ಬಾಬು ತಂದೆರಾಮಯ್ಯಾ ಸಾ : ದುಮಲದಿಬ್ಬಾತಾ: ಕೌರ ಜಿ:  ನೆಲ್ಲೂರ [ಎಪಿ] ಅವರು ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದರು. ಈ ದೂರಿನ ಆಧಾರದ ಮೇರೆಗೆ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ : 52/2021 ಕಲಂ : 395, 341, 323, 504, 506 ಜೊತೆ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಕೊಗೊಳ್ಳಲಾಗಿತ್ತು.
ಸದರಿ ಪ್ರಕರಣದಲ್ಲಿ ಆರೋಪಿತರ ಪತ್ತೆಗಾಗಿ ಶ್ರೀ ಡಿ.ಎಲ್.ನಾಗೇಶ್, ಪೊಲೀಸ್‌ಅಧೀಕ್ಷಕರು ಬೀದರ, ಶ್ರೀ ಗೋಪಾಲ ಎಮ್. ಬ್ಯಾಕೋಡ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬೀದರ, ಶ್ರೀ ದೇವರಾಜ ಬಿ. ಪೊಲೀಸ್ ಉಪಾಧೀಕ್ಷಕರು ಭಾಲ್ಕಿ, ರವರ ಮಾರ್ಗದರ್ಶನದಲ್ಲಿ ಒಂದು ತಂಡವನ್ನು ರಚಿಸಿ, ಮೇಲಾಧಿಕಾರಿಯರ ಮಾರ್ಗದರ್ಶನದ ಮೇರೆಗೆ ಶ್ರೀ.ಪಾಲಾಕ್ಷಯ್ಯಾ ಎಮ್. ಹಿರೇಮಠ ಸಿ.ಪಿ.ಐ ಕಮಲನಗರ ವೃತ್ತ, ಶ್ರೀ ವೀರಣ್ಣಾ.ಎಸ.ದೊಡ್ಡಮನಿ, ಸಿ.ಪಿ.ಐ ಭಾಲ್ಕಿ ಗ್ರಾಮೀಣ ವೃತ್ತ ಮತ್ತು ಶ್ರೀ ಮಹೇಂದ್ರಕುಮಾರ ಜಕಾತಿ, ಪಿ.ಎಸ.ಐ ಭಾಲ್ಕಿ ಗ್ರಾಮೀಣ ಠಾಣೆ ಹಾಗು ಸಿಬ್ಬಂದಿಯವರಾದ ಶ್ರೀ ಬಸವರಾಜ ಎ.ಎಸ.ಐ ಕುಶನೂರ ಠಾಣೆ, ಮಂಜು ಸಿಹೆಚಸಿ-885, ರಾಜೇಂದ್ರ ಸಿಹೆಚಸಿ-913, ಉತ್ತಮ ಸಿಹೆಚಸಿ-923, ರಜನಿಕಾಂತ ಸಿಹೆಚಸಿ-508, ಸಂಜೀವ ಸಿಹೆಚಸಿ -823, ಜ್ಞಾನೇಶ್ವರ ಸಿಪಿಸಿ-1636, ಅಮರೀಶ ಸಿಪಿಸಿ-1738, ನಾಗನಾಥ ಸಿಪಿಸಿ-1014, ಅಂಕುಶ ಸಿಪಿಸಿ-1793, ಅನೀಲ ಎಹೆಚಸಿ-410 ಮತ್ತು ಮಹಾದೇವ ಎಪಿಸಿ-244 ರವರು ಸದರಿ ಪ್ರಕರಣವನ್ನು ಜೂನ್ 17ರಂದು ಭೇದಿಸಿದ್ದಾರೆ.
ಸದರಿ ಆರೋಪಿತರಿಂದ ಈ ಪ್ರಕರಣಕ್ಕೆ ಸಂಬAಧಪಟ್ಟAತೆ ಕೃತ್ಯದಲ್ಲಿ ಬಳಸಿದ ಒಂದು ಲಾರಿ, ಎರಡು ಮೋಟಾರ ಸೈಕಗಳನ್ನು ಜಪ್ತಿ ಮಾಡಿದ್ದು ಅಲ್ಲದೆ ಪ್ರಕರಣದಲಿ ್ಲದರೋಡೆಯಾದ ಒಂದು ಲಾರಿ ಮತ್ತು 08 ಕ್ವೀಂಟಲ್‌ತೊಗರೆ ಬೆಳೆ ಹಾಗು ಆರೋಪಿತರಿಂದ ನಗದು ಹಣ 17 ಲಕ್ಷ ರೂಪಾಯಿಗಳನ್ನು ಜಪ್ತಿ ಮಾಡಿಕೊಂಡಿದ್ದು, ಸದರಿ ದಸ್ತಗಿರಿ ಮಾಡಿದ 06 ಜನ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Latest Indian news

Popular Stories