ಬೀದರ್ ನಗರದ ಶಿವನಗರದ ಹನುಮಾನ್ ಮಂದಿರದಲ್ಲಿ ಕಸ ಗೂಡಿಸುಗ ಮೂಲಕ ಕೇಂದ್ರ ಸಚಿವ ಭಗವಂತ ಖೂಬಾ ದೇವಸ್ಥಾನ ಸ್ವಚ್ಚಗೊಳಸಿದ್ರು ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆ, ದೇಶಾದ್ಯಂತ ಇಂದಿನಿಂದ ಜನವರಿ 22 ರವರೆಗೆ ದೇವಸ್ಥಾನಗಳನ್ನ ಸ್ವಚ್ಚ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ.
ಹಾಗಾಗಿ ಎಲ್ಲರು ದೇಶಾದ್ಯಂತ ದೇವಸ್ತಾನಗಳನ್ನ ಸ್ವಚ್ಚಗೊಳಸುವ ಕೆಲಸ ಮಾಡಲಾಗುತ್ತಿದೆ ಎಂದರು. ಇದೇ ವೇಳೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಮಮಂದಿರ ಉದ್ಘಾಟನೆ ಬಿಜೆಪಿಗೆ ಲಾಭ ಆಗುತ್ತಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಮಮಂದಿರ ಉದ್ಘಾಟನೆಯಿಂದ ಬಿಜೆಪಿಗೆ ಲಾಭ ಆಗುತ್ತೆ ಅಂತಾ ಯಾವತ್ತು ವಿಚಾರ ಮಾಡಿಲ್ಲಾ, ಮಾಡೋದು ಇಲ್ಲಾ.ಬಿಜೆಪಿ ಪಕ್ಷ ದೇಶಕ್ಕಾಗಿ, ಜನರ ಸಮೃದ್ದಿಗಾಗಿ ಕೆಲಸ ಮಾಡ್ತಾ ಇದೆ.
ಈಗಾಗಲೇ ದೇಶದಲ್ಲಿ 13.5 ಕೋಟಿ ಬಡಜನರು ಬಡತನ ರೇಖೆಗಿಂತ ಮೇಲಿದ್ದಾರೆ. ಕಳೆದ 10 ವರ್ಷಗಳಿಂದ ಬಿಜೆಪಿ ಸರ್ಕಾರ ಅಭಿವೃದ್ದಿಪರ ಕೆಲಸ ಮಾಡ್ತಾ ಇದೆ ಎಂದು ಕೇಂದ್ರ ಮೋದಿ ಸರ್ಕಾರವನ್ನ ಕೊಂಡಾಡಿದ್ರು…