ಕಾಡು ಹಂದಿ ದಾಳಿಯಿಂದ ಯುವಕ ಸಾವು: ಅರಣ್ಯಾಧಿಕಾರಿ ಭೇಟಿ

ಕೆಲ ದಿನಗಳ ಹಿಂದೆ ಕಾಡು ಹಂದಿ ದಾಳಿಯಲ್ಲಿ ಮೃತಪಟ್ಟ ಪ್ರವೀಣ ನವನಾಥ (22) ಅವರ ಊರು ದಾಬಕಾಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು

ತಾಲ್ಲೂಕಿನ ಬೋರಾಳ ನರ್ಸರಿ ಬಳಿ ಪ್ರವೀಣ ಅವರು ಹೋಗುತ್ತಿದ್ದಾಗ ಕಾಡು ಹಂದಿ ದಾಳಿ ನಡೆಸಿತ್ತು. ಗಾಯಗೊಂಡಿದ್ದರು.ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

‘ಈ ಕುರಿತು ತನಿಖೆ ಮಾಡುತ್ತಿದ್ದೇವೆ. ಒಂದು ವೇಳೆ ಅವರು ಕಾಡು ಹಂದಿ ದಾಳಿಯಿಂದ ಮೃತಪಟ್ಟಿದ್ದು, ದೃಢಪಟ್ಟರೆ ಅವರ ಕುಟುಂಬಸ್ಥರಿಗೆ ಪರಿಹಾರ ಕೊಡಿಸುತ್ತೇವೆ’ ಎಂದು ಅರಣ್ಯಾಧಿಕಾರಿ ಅಲಿಯೋದ್ದಿನ್ ತಿಳಿಸಿದ್ದಾರೆ.

Latest Indian news

Popular Stories