ಬಾಲಕನಿಗೆ ಸವಾರಿ ಮಾಡಲು ಬೈಕ್ ಕೊಟ್ಟ ಪೋಷಕರಿಗೆ 25000 ತಂಡ

ಹನೂರು: ಬಾಲಕನಿಗೆ ಸವಾರಿ ಮಾಡಲು ಬೈಕ್ ಕೊಟ್ಟ ಪೋಷಕರಿಗೆ ಹನೂರು ಕೋರ್ಟ್ ನ್ಯಾಯಾಧೀಶರು ಗುರುವಾರ ₹25 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.

ಹನೂರು ಪೊಲೀಸರು ಪಟ್ಟಣದಲ್ಲಿ ವಾಹನಗಳ ತಪಾಸಣೆ ನಡೆಸುವಾಗ ಬಾಲಕ ಬೈಕ್ ಚಲಾಯಿಸುತ್ತಿರುವುದು ಕಂಡು ಬಂದಿತ್ತು.ಅಪ್ರಾಪ್ತ ಪಯಸ್ಸಿನವರಿಗೆ ವಾಹನ ಚಲಾಯಿಸಲು ಕೊಡುವುದು ಕೂಡ ಅಪರಾಧವಾಗಿದೆ.

ಈ ಬಗ್ಗೆ ಹನೂರು ಪೋಲಿಸರು ಪ್ರಕರಣ ದಾಖಲಿಸಿ,ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರು ದ್ವಿಚಕ್ರ ಚಲಾಯಿಸಿದ ಬಾಲಕನ ಪೋಷಕರಿಗೆ ₹25 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ಬಾಲಕರಿಗೆ ಚಲಾಯಿಸಲು ವಾಹನ ನೀಡದಂತೆ ಪೋಷಕರಿಗೆ ಕೋರ್ಟ್‌ ಎಚ್ಚರಿಕೆ ನೀಡಿದೆ.

Latest Indian news

Popular Stories