ಉ.ಕ:ಸಿಡಿಲು ಬಡಿದು ಬಾಲಕ ಮೃತ್ಯು

ಕಾರವಾರ: ಶಿರಸಿ ತಾಲೂಕಿನ ಬನವಾಸಿಯಲ್ಲಿ ಸಿಡಿಲು ಬಡಿದು ಬಾಲಕ ಸಾವನ್ನಪ್ಪಿದ ದುರ್ಘಟನೆ ಶನಿವಾರ ಸಂಜೆ ನಡೆದಿದೆ.
ಸಿಡಿಲು ಬಡಿದ ಪರಿಣಾಮ
ಸಾಜೀದ್ ಅಸ್ಪಾಖಲಿ ಶೇಖ್ (16) ಮೃತಪಟ್ಟ ಬಾಲಕ. ಗೆಳೆಯರೊಂದಿಗೆ ಕ್ರಿಕೆಟ್ ಆಡಲು ಬನವಾಸಿ ಕ್ರೀಡಾಂಗಣದಲ್ಲಿದ್ದಾಗ ಹಠಾತ್ ಮಳೆ ಬಂದು ಸಿಡಿಲು ಬಡಿದ ಕಾರಣ ಬಾಲಕ ಸಿಡಿಲಿನ ಶಾಖಕ್ಕೆ ಬಲಿಯಾದ. ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಸಿಡಿಲಿಗೆ ಸಾವನ್ನಪ್ಪಿದನ್ನು ದೃಢಪಡಿಸಿದರು. ಶಿರಸಿ, ಯಲ್ಲಾಪುರ, ಸಿದ್ದಾಪುರ, ದಾಂಡೇಲಿಯಲ್ಲಿ ಸಂಜೆ ಗುಡುಗು ಸಿಡಿಲು ಸಹಿತ ಮಳೆ ಸುರಿದಿದೆ. ಮೇ.22 ರತನಕ ಸಮುದ್ರದ ಮೇಲ್ಮೈಯಲ್ಲಿ ರಭಸದ ಗಾಳಿ ಬೀಸಲಿದೆ ಹಾಗೂ ಮಳೆ ತರಲಿದೆ ಎಂದು ಹವಾಮಾನ ಇಲಾಖೆ ಸುಳಿವು ನೀಡಿದೆ.
….

Latest Indian news

Popular Stories