ಹೆಂಡತಿ ಸಿಟಿ ಬಿಟ್ಟು ಹಳ್ಳಿಗೆ ಬರಲು ಒಪ್ಪುತ್ತಿಲ್ಲ ಎಂದು ಮನನೊಂದು ಯುವಕ ಆತ್ಮಹತ್ಯೆ

ಚಾಮರಾಜನಗರ : ಸಿಟಿಯಲ್ಲಿದ್ದ ಹೆಂಡತಿ ಮನೆಗೆ ಬರಲಿಲು ಒಪ್ಪುತ್ತಿಲ್ಲ ಎಂದು ಮನನೊಂದು ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಮೃತಪಟ್ಟ ವಸಂತ ಕುಮಾರ್ ಚಾಮರಾಜನಗರ ಜಿಲ್ಲೆಯ ಹೊನ್ನಹಳ್ಳಿಯವರಾಗಿದ್ದು ಮೂರು ವರ್ಷದ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ಬೆಂಗಳೂರಿನ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು

ಇತ್ತೀಚೆಗೆ ಆತನ ಊರಿನ ಹಳ್ಳಿಮನೆಯಲ್ಲಿ ನೆಲೆಸಿದ್ದರು ಎನ್ನಲಾಗಿದೆ.ಆದರೆ ಆತನ ಹೆಂಡ್ತಿಗೆ ಹಳ್ಳಿ ಜೀವನ ಹಿಡಿಸಿಲ್ಲ. ಹೀಗಾಗಿ ಆಕೆ ಬೆಂಗಳೂರಿಗೆ ವಾಪಸ್‌ ಬಂದು ತಂದೆ ಮನೆಯಲ್ಲಿ ಇದ್ದರು. ಈ ನಡುವೆ ಹೆಂಡತಿಯನ್ನು ಹೊನ್ನಹಳ್ಳಿಯ ಮನೆಗೆ ಬರುವಂತೆ ಮೃತ ವಸಂತ್ ಕುಮಾರ್ ಮನವಿ ಮಾಡಿದರು, ಕೂಡ ಹೆಂಡತಿ ಹಳ್ಳಿಗೆ ಬರುತ್ತಿಲ್ಲ ಎನ್ನುವದನ್ನು ಮುಂದುಟ್ಟಿಕೊಂಡು ಆತಗ ನೇಣಿಗೆ ಶರಣಾಗಿದ್ದಾನೆ.ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Latest Indian news

Popular Stories