ಶಿವಮೊಗ್ಗದಲ್ಲಿ ನಡೆದ ಗಲಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ. ಪರಮೇಶ್ವರ್ ಕಾರಣ – ಸಚಿವೆ ಶೋಭಾ ಕರಾಂದ್ಲಾಜೆ

ಚಾಮರಾಜನಗರ: ಶಿವಮೊಗ್ಗದ ರಾಗಿ ಗುಡ್ಡದಲ್ಲಿ ನಡೆದ ಗಲಭೆಗೆ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ ಪರಮೇಶ್ವರ್ ಕಾರಣ ಎಂದು ಕೇಂದ್ರ ಸಚಿವೆ ಶೋಭಾ ಕರಾಂದ್ಲಾಜೆ ಆರೋಪಿಸಿದ್ದಾರೆ.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು.ಔರಂಗಜೇಬನ ಖಡ್ಗ ಮೆರವಣಿಗೆ ಮಾಡುತ್ತಿದ್ದಾರೆ. ಆ ಖಡ್ಗದ ತುದಿಗೆ ರಕ್ತದ ಬಣ್ಣ ಹಾಕಿದ್ದಾರೆ. ಹಿಂದೂಗಳ ರಕ್ತ ಬೀಳುತ್ತದೆ ಎಂದು ಉರ್ದುವಿನಲ್ಲಿ ಬರೆದಿದ್ದಾರೆ.ಹಿಂದೂಗಳ ಮರಣಹೋಮ ಮಾಡಿದವರನ್ನು ಪ್ರದರ್ಶನ ಮಾಡುವ ಕೆಲಸ ಮುಸ್ಲಿಮರು ಮಾಡುತ್ತಿದ್ದಾರೆ. ನಿಮ್ಮ ಆದರ್ಶ ಪುರುಷ ಮೊಹಮದ್ ಪೈಗಂಬರ್ ಆಗಿದ್ದರೆ ನಮಗೆ ಖುಷಿ. ನಿಮ್ಮ ಆದರ್ಶ ಪುರುಷ ಅಬ್ದುಲ್ ಕಲಾಂ ಆಗಬೇಕಿತ್ತು, ಆದರೆ ಟಿಪ್ಪು ಸುಲ್ತಾನ್ ಔರಂಗಜೇಬ್ ಆಗಿದ್ದಾರೆ. ಖಡ್ಗ ಪ್ರದರ್ಶನ ಮಾಡುವ ಮೂಲಕ ಸರ್ಕಾರ ಮತ್ತು ಹಿಂದೂಗಳನ್ನು ಹೆದರಿಸಲು ಹೊರಟಿದ್ದೀರಿ ಎಂದರು.

ಇದಕ್ಕೆಲ್ಲ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್ ಪ್ರರಮೇಶ್ವರ್ ಕುಮ್ಮುಕ್ಕು ಇದೆ. ಹಿಂದೂಗಳ ಅಪಮಾನ ಮಾಡುವ ರೀತಿಯಲ್ಲಿ ರಾಜ್ಯದಲ್ಲಿ ಈದ್ ಮಿಲಾದ್ ನಡೆಯುತ್ತಿದೆ. ಶಿವಮೊಗ್ಗದ ಎಲ್ಲ ಮುಸಲ್ಮಾನರ ಕೈಯಲ್ಲಿ ಕಲ್ಲು, ತಲವಾರುಗಳಿದ್ದವು. ಅದನ್ನೆಲ್ಲ ಯಾಕೆ ಪೊಲೀಸರು ಗಮನಿಸಲಿಲ್ಲ.ಎಂದು ಸಿದ್ದರಾಮಯ್ಯನವರಿಗೆ ಶೋಭಾ ಕರಂದ್ಲಾಜೆ ಪ್ರಶ್ನೆ ಮಾಡಿದರು.

Latest Indian news

Popular Stories