ಹರಿಹರದಲ್ಲಿ ಸೀರತ್ ಸಮಾವೇಶ ಮತ್ತು ಪುಸ್ತಕ ಬಿಡುಗಡೆ ಸಮಾರಂಭ

ಹರಿಹರ: (2-10-2023)

ಹರಿಹರದ ರಾಬಿತಾ ಮಿಲ್ಲತ್ ಕಮಿಟಿ ಮತ್ತು ಸ್ಥಾನೀಯ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ‘ಸಮಾನತೆಯ ಸಮಾಜದ ಶಿಲ್ಪಿ ಪ್ರವಾದಿ ಮುಹಮ್ಮದ್ (ಸ)’ ಅಭಿಯಾನದ ಪ್ರಯುಕ್ತ ವಿಚಾರಗೋಷ್ಟಿ ಮತ್ತು ‘ನನ್ನ ಅರಿವಿನ ಪ್ರವಾದಿ’ ಪುಸ್ತಕ ಬಿಡುಗಡೆ ಸಮಾರಂಭವು ಆರೋಗ್ಯಮಾತಾ ಚರ್ಚ್ ಆವರಣದ ಮರಿಯ ಸದನದಲ್ಲಿ ಜರುಗಿತು.
ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠ ಇದರ ಪೀಠಾಧಿಪತಿಗಳಾದ ಶ್ರೀ ವಚನಾನಂದ ಸ್ವಾಮೀಜಿಯವರು ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಚರ್ಚ್ ನ ಪ್ರಧಾನ ಧರ್ಮಗುರುಗಳಾದ ಫಾ| ಜಾರ್ಜ್ ಕೆ.ಎ., ಶಾಸಕರಾದ ಬಿ.ಪಿ. ಹರೀಶ್, ಮಾಜಿ ಶಾಸಕರಾದ ಹೆಚ್.ಎಸ್. ಶಿವಶಂಕರ್, ಎಸ್. ರಾಮಪ್ಪ, ರಾಜಕೀಯ ಧುರೀಣರಾದ ನಂದಿಗಾವಿ ಶ್ರೀನಿವಾಸ್ ಭಾಗವಹಿಸಿದ್ದರು.

ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಯವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಸೀರತ್ ಸಂದೇಶವನ್ನು ನೀಡಿದರು.

Latest Indian news

Popular Stories