ಚಾಮರಾಜನಗರಕ್ಕೆ ಅಂಟಿದ್ದ ಕಳಂಕವನ್ನು ಸಿಎಂ ಸಿದ್ದರಾಮಯ್ಯ ಅಳಿಸಿ ಹಾಕಿದ್ದಾರೆ.
ಈ ಹಿಂದೆ ಸಿಎಂ ಆಗಿದ್ದಾಗ 12 ಬಾರಿ ಭೇಟಿ ನೀಡಿದ್ದ ಸಿದ್ದರಾಮಯ್ಯ ಇಂದು ಚಾಮರಾಜನಗರಕ್ಕೆ ಮತ್ತೆ ಭೇಟಿ ನೀಡಿದ್ದಾರೆ.
ಚಾಮರಾಜನಗರಕ್ಕೆ ಭೇಟಿ ನೀಡಿದರೆ ಆರು ತಿಂಗಳ ಒಳಗೆ ಅಧಿಕಾರ ಕಳೆದುಕೊಳ್ತಾರೆ ಎಂಬ ಮೂಢನಂಬಿಕೆ ತೊಡೆದು ಹಾಕಿದ್ದಾರೆ. ವೀರೇಂದ್ರ ಪಾಟೀಲ್ 1991 ರಲ್ಲಿ ಚಾಮರಾಜನಗರಕ್ಜೆ ಬಂದು ಹೋಗಿದ್ದೆ ಕೊನೆ. ಆಗಿನಿಂದ ಚಾಮರಾಜನಗಕ್ಕೆ ಈ ಕಳಂಕ ಅಂಟಿಕೊಂಡಿತ್ತು. ಈ ಮೌಢ್ಯಕ್ಕೆ ಬೆದರಿದ ಎಸ್. ಬಂಗಾರಪ್ಪ, ವೀರಪ್ಪಮೊಯ್ಲಿ, ಎಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್, ಎಸ್. ಎಂ. ಕೃಷ್ಣ, ಧರಂಸಿಂಗ್ ಇತ್ತ ಕಾಲಿಟ್ಟಿರಲಿಲ್ಲ.
ಮೊದಲ ಅವಧಿಯಲ್ಲಿ ಸಿಎಂ ಆಗಿದ್ದ ಸಂದರ್ಭ ಸಿಎಂ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಭೇಟಿ ನೀಡಿ ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದರು. ಬಳಿಕ ಐದು ವರ್ಷಗಳ ಕಾಲ ಆಡಳಿತ ನಡೆಸಿದ್ದರು.