9 ನೇ ತರಗತಿಯ ಪ್ರಶ್ನೆ ಪತ್ರಿಕೆಯಲ್ಲಿ ಮುಸ್ಲಿಮರ ಕುರಿತು ಅವಹೇಳನಕಾರಿ ಹೇಳಿಕೆ – ಶಿಕ್ಷಕ ವಜಾ

 

ಬಹ್ರೈಚ್, ಉತ್ತರ ಪ್ರದೇಶ – ಸೆಪ್ಟೆಂಬರ್ 22 ರಂದು, ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿರುವ ಶಾಲೆಯೊಂದು 9 ನೇ ತರಗತಿಯ ಹಿಂದಿ ಪ್ರಶ್ನೆ ಪತ್ರಿಕೆಯಲ್ಲಿ ಭಾರತೀಯ ಮುಸ್ಲಿಮರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಹೊಂದಿದ್ದು, ಅವರನ್ನು ಭಯೋತ್ಪಾದಕರು ಎಂದು ವಿವರಿಸಿದಾಗ ಅದು ವಿವಾದಕ್ಕೆ ಗುರಿಯಾಗಿದೆ. ಪ್ರಶ್ನೆ ಪತ್ರಿಕೆಯನ್ನು ಶಾಲೆಯ ಶಿಕ್ಷಕರೊಬ್ಬರು ಸಿದ್ಧಪಡಿಸಿದ್ದರು.

ಸ್ಥಳೀಯ ಮುಸ್ಲಿಂ ಸಮುದಾಯದ ಸದಸ್ಯರು ಆಕ್ಷೇಪಾರ್ಹ ವಿಷಯಕ್ಕೆ ತ್ವರಿತವಾಗಿ ಪ್ರತಿಕ್ರಿಯಿಸಿದ್ದು, ಬಹ್ರೈಚ್‌ನಲ್ಲಿನ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಗೆ ಮನವಿ ಪತ್ರ ನೀಡಿ ಶಾಲೆಯ ಮಾನ್ಯತೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಮನವಿ ಪತ್ರ ಸಲ್ಲಿಸುವ ನಿಯೋಗದ ಭಾಗವಾಗಿದ್ದ ಸುಖಿಯಾನ್ ಅಹ್ಮದ್, ಶಾಲೆಯ ಅರ್ಧವಾರ್ಷಿಕ ಪರೀಕ್ಷೆಯ ವೇಳೆ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಇಂತಹ ವಿಚಾರ ಕಳವಳ ಸೃಷ್ಟಿಸಿದ್ದು ಅವಹೇಳನಕಾರಿ ವಿಚಾರದ ಕುರಿತು ವ್ಯಾಪಾರ ಆಕ್ರೋಶ ವ್ಯಕ್ತವಾಗಿದೆ.

ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮೋನಿಕಾ ರಾಣಿ ಭರವಸೆ ನೀಡಿದರು. ವಿವಾದಕ್ಕೆ ಪ್ರತಿಕ್ರಿಯೆಯಾಗಿ, ಶಾಲಾ ಆಡಳಿತ ಮಂಡಳಿಯು ಆಕ್ಷೇಪಾರ್ಹ ಪ್ರಶ್ನೆ ಪತ್ರಿಕೆಯನ್ನು ಸೃಷ್ಟಿಸಿದ ಹಿಂದಿ ಶಿಕ್ಷಕರನ್ನು ವಜಾಗೊಳಿಸುವ ಮೂಲಕ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದೆ. ಇದಲ್ಲದೆ, ಅವರು ಜಿಲ್ಲಾಡಳಿತ ಮತ್ತು ಮುಸ್ಲಿಂ ಸಮುದಾಯದವರ ಬಳಿ ಕ್ಷಮೆಯಾಚಿಸಿದ್ದಾರೆ.

Latest Indian news

Popular Stories