ದೊಡ್ಡಬಳ್ಳಾಪುರ: ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಮಾರಾಟಕ್ಕೆಂದು ತಾವರೆ ಹೂ ಕೀಳಲು ಕೆರೆಗೆ ಇಳಿದಿದ್ದ ತಂದೆ – ಮಗ ನೀರಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ತಾಲೂಕಿನ ಭೂಚನಹಳ್ಳಿ ಕೆರೆಯಲ್ಲಿ ಬುಧವಾರ ಸಂಜೆ ನಡೆದಿದೆ.
ಮೃತರ ದೊಡ್ಡಬಳ್ಳಾಪುರದ ಶಾಂತಿನಗರದ ನಿವಾಸಿ ಪುಟ್ಟರಾಜು (45), ಕೇಶವ (15) ಎಂದು ಗುರುತಿಸಲಾಗಿದೆ.
ತಾವರೆ ಹೂ ಕೀಳಲು ತಂದೆ ಮತ್ತು ಮಗ ಬಂದಿದ್ದರೆನ್ನಲಾಗಿದೆ. ಬಟ್ಟೆ, ಮೊಬೈಲ್ ಮತ್ತು ಚಪ್ಪಲಿ ದಡದಲ್ಲಿ ಇಟ್ಟು, ತಾವರೆ ಹೂ ಕೀಳುವ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಸ್ಥಳಕ್ಕೆ ಬಂದ ಮತ್ತೋರ್ವ ಮಾರಾಟಗಾರ ಮೊಬೈಲ್ ರಿಂಗ್ ಕೇಳಿ ಕರೆ ಸ್ವೀಕರಿಸಿದಾಗ ಮೃತನ ತಾಯಿ ತಾವರೆ ಹೂ ಕೀಳಲು ತಂದೆ ಮಗ ಬಂದಿದ್ದರು ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ದೊಡ್ಡ ಬೆಳವಂಗಲ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಹರೀಶ್, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ದ್ದು. ಕತ್ತಲಾದ ಕಾರಣ ಶವ ಶೋಧ ಕಾರ್ಯಾಚರಣೆ ನಿಲ್ಲಿಸಲಾಗಿತ್ತು.ಇಂದು ಬೆಳಗ್ಗೆ ಕಾರ್ಯಾಚರಣೆ ಮುಂದುವರೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.