ಬೆಂಕಿ ಹಚ್ಚಿಕೊಂಡು ದಂಪತಿ ಆತ್ಮಹತ್ಯೆಗೆ ಯತ್ನ; ಪತ್ನಿ ಸಾವು, ಪತಿ ಸ್ಥಿತಿ ಗಂಭೀರ

ಚಿಕ್ಕಬಳ್ಳಾಪುರ: ಪತಿ-ಪತ್ನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ನಗರಗೆರೆ ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ಪತ್ನಿ ಶಾರದಾ (40) ಸಾವನ್ನಪ್ಪಿದ್ದು, ಪತಿ ಶಂಕರಯ್ಯ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.ಶಂಕರಯ್ಯ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.

ಇನ್ನು ಶಂಕರಯ್ಯ ಅಕ್ಕ-ತಂಗಿಯನ್ನೇ ವಿವಾಹವಾಗಿದ್ದ. ಕುಡಿದ ಮತ್ತಿನಲ್ಲಿ ಎರಡನೇ ಪತ್ನಿ ಶಾರದಾ ಮೇಲೆ ಪೆಟ್ರೋಲ್ ಸುರಿದಿದ್ದಾನೆ. ಈ ವೇಳೆ ಶಾರದಾ ಬೆಂಕಿ ಕಡ್ಡಿ ಗೀರಿದ್ದು, ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಪಕ್ಕದಲ್ಲೇ ಇದ್ದ ಶಂಕರಯ್ಯಗೂ ತಗುಲಿದೆ. ಸ್ಥಳದಲ್ಲೇ ಪತ್ನಿ ಶಾರದಾ ಮೃತಪಟ್ಟಿದ್ದಾರೆ.

ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.p

Latest Indian news

Popular Stories