ಚಿಕ್ಕಮಗಳೂರು:ಚಿಕ್ಕಮಗಳೂರಿನಲ್ಲಿ ಕೂಡ ಕೊರೊನಾ ವಕ್ಕರಿಸಿದೆ. ಜಿಲ್ಲೆಯಲ್ಲಿ ಇಬ್ಬರು ಕೋವಿಡ್ ಟೆಸ್ಟ್ ಮಾಡಿಸಿಕೊಂಡವರಿಗೆ ಸೊಂಕು ಪಾಸಿಟಿವ್ ಬಂದಿದೆ. ಇಬ್ಬರಿಗೂ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಮತ್ತೊಮ್ಮೆ ಇಬ್ಬರ ಕೋವಿಡ್ ಟೆಸ್ಟ್ಗಾಗಿ ಅಧಿಕಾರಿಗಳು ಸ್ಯಾಂಪಲ್ ಕಳುಹಿಸಿದ್ದಾರೆ.
ನಿನ್ನೆ ಚಿಕ್ಕಮಗಳೂರು ನಗರದ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿಕೊಂಡಿದ್ದರು.ಅದನ್ನು ಲ್ಯಾಬ್ ನಲ್ಲಿ ಫಲಿತಾಂಶ ಬಂದ ನಂತರ ಕೋವಿಡ್ ಬಂದಿದ್ದು ದೃಡವಾಗಿದೆ.
ಇನ್ನೂ ರಾಮನಗರದಲ್ಲಿ ಎರಡನೇ ಕೋವಿಡ್ ಪ್ರಕರಣ ದಾಖಲಾಗಿದೆ.21 ವರ್ಷದ ಯುವತಿಗೆ ಕೊವಿಡ್ ದೃಢಪಟ್ಟಿದ್ದು ಆಕೆಯ ತಾಯಿಯನ್ನು ಪರೀಕ್ಷೆ ಮಾಡಲಾಗಿದೆ.
ಕಾರವಾರದಲ್ಲಿ ಒಬ್ಬರಿಗೆ ಕೋವಿಡ್ ತಗುಲಿದೆ.ಈಗಾಗಲೇ ಕೊವಿಡ್ ನಿಂದ ಬೆಂಗಳೂರಿನಲ್ಲಿ ಒಂದು ಸಾವಾಗಿದೆ