ಚಿಕ್ಕಮಗಳೂರು :ಅನುಮಾನಾಸ್ಪದವಾಗಿ ಗೃಹಿಣಿ ಶವ ಪತ್ತೆ : ಗಂಡನಿಂದಲೇ ಕೊಲೆ ಶಂಕೆ

ಚಿಕ್ಕಮಗಳೂರು :ಪತಿಗೆ ಇನ್ನೊಂದು ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇರುವುದು ಗೊತ್ತಾಗಿ ಪತ್ನಿ ಪ್ರಶ್ನಿಸಿದಕ್ಕೆ ಆಕೆಗೆ ಇಂಜೆಕ್ಷನ್ ಕೊಟ್ಟು ಕೊಂದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ.

ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಗ್ರಹಿಣಿ ಸಾವನ್ನಪ್ಪಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.ಸಾವನ್ನಪ್ಪಿರುವ ಗೃಹಿಣಿಯನ್ನ ಶ್ವೇತ (31) ಎಂದು ಗುರುತಿಸಲಾಗಿದ್ದು, ತರಾತುರಿಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದ ಪತಿ ದರ್ಶನನ್ನು ಪೊಲೀಸರು ಬಂಧಿಸಿದ್ದಾರೆ.

ಪತಿಯ ಅಕ್ರಮ ಸಂಬಂಧದ ಬಗ್ಗೆ ಪೋಷಕರಿಗೆ ಮೃತ ಶ್ವೇತ ಆಡಿಯೋ ಕಳಿಸಿದ್ದಳು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದರ್ಶನ ಲ್ಯಾಬ್ ಟೆಕ್ನಿಷಿಯನ್ ಆಗಿದ್ದಾನೆ.ಹಾರ್ಟ್ ಅಟ್ಯಾಕ್ ಆಗಿದೆ ಎಂದು ಪತ್ನಿಯ ಪೋಷಕರಿಗೆ ದರ್ಶನ್ ಮಾಹಿತಿ ನೀಡಿದ್ದ ಎನ್ನಲಾಗುತ್ತಿದೆ.

ಏಳು ವರ್ಷದ ಹಿಂದೆ ಶ್ವೇತಾ ದರ್ಶನ ಜೊತೆ ವಿವಾಹವಾಗಿದ್ದಳು ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಗೆ ಶ್ವೇತಾ ಮೃತದೇಹ ಇದೀಗ ರವಾನೆ ಮಾಡಲಾಗಿದೆ.

Latest Indian news

Popular Stories