ಪ್ರಥಮ ಚಿಕಿತ್ಸೆ ವೇಳೆ ಇಂಜೆಕ್ಷನ್ ಅಡ್ಡ ಪರಿಣಾಮ ಆರೋಪ: ಬಾಲಕ ಮೃತ್ಯು

ಚಿತ್ರದುರ್ಗ: ಹೊಲಿಗೆ ಯಂತ್ರದಲ್ಲಿ ಕೈ ಸಿಲಿಕಿಸಿಕೊಂಡು ಗಾಯದಿಂದ ಬಳಲುತ್ತಿದ್ದ ಬಾಲಕನೊಬ್ಬ ಪ್ರಥಮ ವೈದ್ಯಕೀಯ ಚಿಕಿತ್ಸೆ ಬಳಿಕ ಮೃತಪಟ್ಟಿದ್ದು, ಚಿಕ್ಕಜಾಜೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ವಿಜಯಮ್ಮ ವಿರುದ್ಧ ದೂರು ದಾಖಲಾಗಿದೆ.

ಚಿಕ್ಕಜಾಜೂರು ಸಮೀಪದ ಹೊಸಹಳ್ಳಿಯ ಸುನೀತಾ- ಮಾಲತೇಶ ದಂಪತಿ ಪುತ್ರ ಚಿರಾಯಿ (7) ಮೃತ ಬಾಲಕ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ.

ಮಂಗಳವಾರ ಚಿರಾಯಿ ಮನೆಯಲ್ಲಿದ್ದ ಬಟ್ಟೆ ಹೊಲಿಯುವ ಯಂತ್ರದಲ್ಲಿ ಗಾಯ ಮಾಡಿಕೊಂಡಿದ್ದನು. ಪೋಷಕರು ಚಿಕ್ಕಜಾಜೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಬಾಲಕನಿಗೆ ನೋವು ನಿವಾರಕ ಚುಚ್ಚುಮದ್ದು ನೀಡಿದ ಶುಶ್ರೂಷಕಿ ವಿಜಯಮ್ಮ ಹೊಳಲ್ಕೆರೆ ಸಾರ್ವಜನಿಕ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದರು.

‘ಹೊಳಲ್ಕೆರೆ ಪಟ್ಟಣ ತಲುಪುವ ವೇಳೆಗೆ ಬಾಲಕನಿಗೆ ವಾಂತಿಯಾಗಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಬಳಿಕ ಬಾಲಕನನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ. ಪೋಷಕರು ನೀಡಿದ ದೂರಿನ ಆಧಾರದ ಮೇರೆಗೆ FIR ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Latest Indian news

Popular Stories