ಮಣಿಪಾಲ: ಹದಗೆಟ್ಟಿರುವ ರಸ್ತೆಯ ದುರಸ್ತಿಗೆ ಆಗ್ರಹ.


ಮಣಿಪಾಲದ ಶಾಂತಿನಗರ ಮುಖ್ಯ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯಲ್ಲಿ ಹೊಂಡ ಗುಂಡಿಗಳು ಬಿದ್ದು ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ಎದುರಾಗಿದೆ. ಸಂಬಂಧಪಟ್ಟವರು ರಸ್ತೆಯನ್ನು ದುರಸ್ತಿ ಪಡಿಸುವಂತೆ ಸಮಾಜಸೇವಕ ನಿತ್ಯಾನಂದ ಒಳಕಾಡುವರು ಸಂಬಂಧಪಟ್ಟವರಲ್ಲಿ ಆಗ್ರಹಪಡಿಸಿದ್ದಾರೆ.

ಇಲ್ಲಿಯ ರಸ್ತೆಯ ಅವ್ಯವಸ್ಥೆಯಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ರಸ್ತೆಯ ಅಕ್ಕ ಪಕ್ಕದ ಮನೆಗಳಿಂದ ಬಟ್ಟೆ ತೊಳೆದ ನೀರು, ಸ್ನಾನಾದಿಗಳ ಕಶ್ಮಲ ನೀರು ರಸ್ತೆಗಳಿಗೆ ಹರಿದು ಬರುತ್ತಿರುವುದು ಕಂಡುಬಂದಿದೆ. ಇದರಿಂದ ಪರಿಸರದಲ್ಲಿ ಗಬ್ಬುವಾಸನೆ ಹರಡಿದ್ದು, ಮೂಗು ಮುಚ್ಚಿಕೊಂಡು ತಿರುಗಾಡಬೇಕಾದ ಸ್ಥಿತಿ ಎದುರಾಗಿದೆ. ಮಾರಕ ಸೊಳ್ಳೆಗಳ ಹುಟ್ಟಿಗೂ ಕಾರಣವಾಗುತ್ತಿದೆ. ಶಾಲಾ ವಿದ್ಯಾರ್ಥಿಗಳು ಈ ರಸ್ತೆಯಿಂದ ನಡೆದು ಸಾಗುವಾಗ, ಚಲಿಸುವ ವಾಹನಗಳ ಚಕ್ರದಿಂದ ಕೊಳಚೆ ನೀರನ್ನು ಮೈಮೇಲೆ ಎರಚಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಇಲ್ಲಿಯ ಸಮಸ್ಯೆಯನ್ನು ಜನಪ್ರತಿನಿಧಿಗಳ, ಅಧಿಕಾರಿ ವರ್ಗದವರ ಗಮನಕ್ಕೆ ತಂದರೂ ಯಾರೊಬ್ಬರು ಎಚ್ಚೆತ್ತುಕೊಳ್ಳದೆ ಮೌನರಾಗಿದ್ದಾರೆಂದು ಸಾರ್ವಜನಿಕರು ದೂರಿದ್ದಾರೆ. ಜಿಲ್ಲಾಡಳಿತ ಕಛೇರಿಗೆ ಶಾಂತಿನಗರದ ಮುಖ್ಯರಸ್ತೆ ಸನಿಹ ಇದ್ದು  ಒಮ್ಮೆ ಜಿಲ್ಲಾಧಿಕಾರಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಲ್ಲಿ ಸಮಸ್ಯೆಗೆ ಬೇಗನೆ ಮುಕ್ತಿ ದೊರೆಯುತಿತ್ತು ಎಂಬ ಭರವಸೆಯಲ್ಲಿದ್ದೇವೆ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ.

Manipal: Demand for repair of dilapidated road.

Latest Indian news

Popular Stories